Kannada Duniya

Headache remedy:ಈ ಗಿಡಮೂಲಿಕೆಗಳು ತಲೆನೋವಿಗೆ ಬೆಸ್ಟ್ ಮನೆಮದ್ದು…!

ತಲೆನೋವು ಶುರುವಾಗಲು ಅನೇಕ ಕಾರಣಗಳಿವೆ. ಕೆಲವೊಮ್ಮೆ ಕಂಪ್ಯೂಟರ್ ಮುಂದೆ ದೀರ್ಘಕಾಲ ಕುಳಿತುಕೊ‍ಳುವುದರಿಂದ ತಲೆನೋವು ಬರುತ್ತದೆ. ಇದಕ್ಕೆ ಔಷಧಿಗಳನ್ನು ತೆಗೆದುಕೊಂಡು ಆರೋಗ್ಯಕ್ಕೆ ಹಾನಿಮಾಡಿಕೊಳ್ಳುವ ಬದಲು ಕೆಲವು ಗಿಡಮೂಲಿಕೆಗಳನ್ನು ಬಳಸಿ ತಲೆನೋವನ್ನು ನಿವಾರಿಸಿಕೊಳ್ಳಿ.

-ಕೂದಲಿನ ಸೌಂದರ್ಯ ಹೆಚ್ಚಿಸಲು ಮೆಹಂದಿ ಎಲೆಗಳನ್ನು ಬಳಸುತ್ತಾರೆ. ಈ ಮೆಹಂದಿ ಎಲೆಗಳನ್ನು ಬಳಸಿ ತಲೆನೋವನ್ನು ಕೂಡ ವಾಸಿಮಾಡಬಹುದು. ಮೆಹಂದಿ ಎಲೆಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ. ಅಲ್ಲದೇ ಮೆಹಂದಿ ಪುಡಿಯ ಪೇಸ್ಟ್ ನ್ನು ತಲೆಗೆ ಹಚ್ಚಬಹುದು. ಇದು ತಲೆಯನ್ನು ತಂಪಾಗಿಸಿ ತಲೆನೋವನ್ನು ವಾಸಿಮಾಡುತ್ತದೆ.

-ಬೇವಿನ ಎಲೆಗಳಲ್ಲಿ ಔಷಧೀಯ ಗುಣಗಳಿವೆ. ಇದನ್ನು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಬಳಸುತ್ತಾರೆ. ಅಲ್ಲದೇ ಬೇವಿನೆ ಎಲೆಗಳನ್ನು ಬಳಸಿ ತಲೆನೋವನ್ನು ಕೂಡ ನಿವಾರಿಸಿಕೊಳ್ಳಬಹುದು. ಹಾಗಾಗಿ ತೆಂಗಿನೆಣ್ಣೆಯಲ್ಲಿ ಬೇವಿನ ಎಲೆಗಳನ್ನು ಹಾಕಿ ಸ್ವಲ್ಪ ಸಮಯದವರೆಗೂ ಬಿಸಿ ಮಾಡಿ ಬಳಿಕ ಅದನ್ನು ತಣ್ಣಳಗಾಗಿಸಿ ನೆತ್ತಿಗೆ ಹಚ್ಚಿ ಮಸಾಜ್ ಮಾಡಿ.

ಒತ್ತಡ ತಲೆನೋವಿಗೆ ಈ ಚಹಾಗಳೇ ಔಷಧ

-ಪುದೀನಾ ಎಲೆಗಳಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್, ನಂಜುನಿವಾರಕ , ನೋವು ನಿವಾರಕ ಗುಣಗಳಿವೆ. ಇದನ್ನು ಬಳಸಿ ಅನೇಕ ನೋವುಗಳನ್ನು ನಿವಾರಿಸಬಹುದು, ಹಾಗಾಗಿ ಪುದೀನಾ ಎಲೆಗಳನ್ನು ಪೇಸ್ಟ್ ಮಾಡಿ ಹಣೆಗೆ ಹಚ್ಚಿ. ಅಥವಾ ಪುದೀನಾ ಎಣ್ಣೆಯನ್ನು ಬಳಸಿ. ಇದು ತಲೆನೋವಿಗೆ ಬೇಗ ಪರಿಹಾರ ನೀಡುತ್ತದೆ.

These medicinal plants can help get rid of Head aches


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...