Kannada Duniya

ಚರ್ಮದಲ್ಲಿ ಕಂಡುಬರುವ ಈ ಲಕ್ಷಣಗಳು ಈ ಸಮಸ್ಯೆಯ ಸೂಚನೆಯಂತೆ

ವ್ಯಕ್ತಿಯ ಮುಖ ನೋಡಿ ಅವರ ವ್ಯಕ್ತಿತ್ವವನ್ನು ತಿಳಿಯಬಹುದೆಂದು ಹೇಳುತ್ತಾರೆ. ಅದೇ ರೀತಿ ನಮ್ಮ ದೇಹದ ಅಂಗಗಳು ಕೂಡ ನಮ್ಮ ದೇಹದೊಳಗಿರುವ ಕಾಯಿಲೆಗಳ ಬಗ್ಗೆ ತಿಳಿಸುತ್ತದೆಯಂತೆ. ಅದರಂತೆ ನಮ್ಮ ಚರ್ಮದಲ್ಲಿ ಗೋಚರಿಸುವಂತಹ ಈ ಲಕ್ಷಣಗಳು ನಮ್ಮ ದೇಹದಲ್ಲಿ ಈ ಸಮಸ್ಯೆ ಇದೆ ಎಂಬುದಾಗಿ ತಿಳಿಸುತ್ತದೆಯಂತೆ.

ಸ್ಕಿನ್ ಟ್ಯಾನ್ : ಇದು ದೇಹದಲ್ಲಿ ಇನ್ಸುಲಿನ್ ಮಟ್ಟದಲ್ಲಿ ಅಸಮತೋಲನ ಉಂಟಾದಾಗ ಕಂಡುಬರುತ್ತದೆಯಂತೆ. ನಮ್ಮ ದೇಹದಲ್ಲಿ ಇನ್ಸುಲಿನ್ ಪ್ರತಿರೋಧ ಹೆಚ್ಚಾದಾಗ ಕುತ್ತಿಗೆ ಮತ್ತು ಮುಖದಲ್ಲಿ ನರಹುಲಿಗಳು ಮೂಡುತ್ತದೆ. ಹಾಗಾಗಿ ಆಂತವರು ಮೆಂತ್ಯಬೀಜದ ಚಹಾವನ್ನು ಕುಡಿಯಿರಿ.

ನಮ್ಮ ದೇಹದ ಹಾರ್ಮೋನ್ ನಲ್ಲಿ ವ್ಯತ್ಯಾಸವಾದಾಗ ಮುಖದಲ್ಲಿ ಮೊಡವೆಗಳು ಮೂಡುತ್ತದೆಯಂತೆ. ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆಯಂತೆ. ಇದನ್ನು ಹೋಗಲಾಡಿಸಲು ಬೆರಿ ಹಣ್ಣುಗಳನ್ನು ಸೇವಿಸಿ.

ಚರ್ಮದಲ್ಲಿ ಶುಷ್ಕತೆ ಕಂಡುಬಂದರೆ ಅದು ಕೊಬ್ಬಿನಾಂಶದ ಕೊರತೆಯನ್ನು ಸೂಚಿಸುತ್ತದೆ. ಹಾಗಾಗಿ ಅಗಸೆ ಬೀಜಗಳನ್ನು ಹೆಚ್ಚು ಸೇವಿಸಿ.

ಮುಖದಲ್ಲಿ ಪಿಗ್ಮೆಂಟೇಶನ್ ಹೆಚ್ಚಾದರೆ ಈಸ್ಟ್ರೋಜನ್ ಹಾರ್ಮೋನ್ ಅಸಮತೋಲನವೇ ಕಾರಣ. ಹಾಗಾಗಿ ಆಂತವರು ಅಗಸೆ ಬೀಜ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜಗಳನ್ನು ಸೇವಿಸಿ.

ಅಲ್ಲದೇ ಮಹಿಳೆಯರಲ್ಲಿ ಆಂಡ್ರೋಜನ್ ಹಾರ್ಮೋನ್ ನ ಉತ್ಪಾದನೆ ಹೆಚ್ಚಾದಾಗ ಮುಖದಲ್ಲಿ ಕೂದಲು ಬೆಳೆಯುತ್ತದೆ. ಇದನ್ನು ನಿವಾರಿಸಲು ಪುದೀನಾ ಚಹಾ ಕುಡಿಯಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...