Kannada Duniya

ಮಗುವಿನ ಎತ್ತರ ಹೆಚ್ಚಾಗಲು ಹಾಲಿನಲ್ಲಿ ಇದನ್ನು ಬೆರೆಸಿ ಕುಡಿಸಿರಿ

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚು ಫಾಸ್ಟ್ ಫುಡ್ ಗಳನ್ನು ಸೇವಿಸುವುದರಿಂದ ಅವರ ಬೆಳವಣಿಗೆಯಲ್ಲಿ ಸಮಸ್ಯೆಯಾಗುತ್ತಿದೆ. ಹಾಗಾಗಿ ಮಕ್ಕಳು ತೂಕ ನಷ್ಟವಾಗುವುದು ಎತ್ತರ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತಿದೆ. ಹಾಗಾಗಿ ನಿಮ್ಮ ಮಕ್ಕಳ ಹೈಟ್ ಹೆಚ್ಚಿಸಲು ಹಾಲಿನಲ್ಲಿ ಇದನ್ನು ಮಿಕ್ಸ್ ಮಾಡಿ ಕುಡಿಯಿರಿ.

ನಿಮ್ಮ ಮಕ್ಕಳ ಹೈಟ್ ಹೆಚ್ಚಾಗಲು ಬಾದಾಮಿ, ಅಂಜೂರ, ಎಳ್ಳು, ಹಾಗೂ ಅಶ್ವಗಂಧವನ್ನು ನೀಡಿ. ಅದಕ್ಕಾಗಿ 4 ಬಾದಾಮಿ, 2 ಚಮಚ ಎಳ್ಳು, 4 ಅಂಜೂರ ಮತ್ತು 1 ಚಮಚ ಅಶ್ವಗಂಧವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಪೇಸ್ಟ್ ತಯಾರಿಸಿ ಅದನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಮಕ್ಕಳಿಗೆ ನೀಡಿ.

ಇದರಿಂದ ಮಕ್ಕಳಿಗೆ ಸಾಕಷ್ಟು ನಿದ್ರೆ ಮಾಡಲು ಸಹಾಯವಾಗುತ್ತದೆ. ಇದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ದೇಹದಲ್ಲಿ ಮಕ್ಕಳ ಹೈಟ್ ಹೆಚ್ಚಿಸುವಂತಹ ಹಾರ್ಮೋನ್ ಹೆಚ್ಚಾಗುತ್ತದೆ. ಹಾಗೇ ಇದರ ಜೊತೆ ಮಕ್ಕಳಿಗೆ ಪ್ರತಿದಿನ ಸ್ವಲ್ಪ ಹೊತ್ತು ಕ್ರೀಡೆಗಳಲ್ಲಿ ತೊಡಗಿಕೊಳ್ಳಲು ಸಲಹೆ ನೀಡಿ. ಪ್ರತಿದಿನ ಅರ್ಧ ಗಂಟೆ ಸೈಕ್ಲಿಂಗ್ ಮಾಡಲು ತಿಳಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...