Kannada Duniya

ಕತ್ತಿನ ಹಿಂಭಾಗ ಕಪ್ಪಗಾಗಿದೆಯಾ…? ಚಿಂತಿಸದಿರಿ ಇಲ್ಲಿದೆ ಪರಿಹಾರ

ಸೂರ್ಯನ ಕಿರಣಗಳು ನೇರವಾಗಿ ತ್ವಚೆಯ ಮೇಲೆ ಬೀಳುವುದರಿಂದ ಟ್ಯಾನಿಂಗ್, ಪಿಗ್ಮೆಂಟೇಶನ್ ಮತ್ತಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕುತ್ತಿಗೆಯ ಹಿಂಭಾಗದಲ್ಲಿ ಕಪ್ಪಾಗುವುದು ಅಥವಾ ಕೊಳಕು ಸಂಗ್ರಹಣೆಯಾಗುವುದು ಕೂಡಾ ಇದರ ಒಂದು ಲಕ್ಷಣ.

ಯಾವುದೇ ಸೋಪು ಅಥವಾ ಮೆಡಿಕಲ್ ಗಳಲ್ಲಿ ದೊರೆಯುವ ಕ್ರೀಮ್ ಗಳನ್ನು ಇದನ್ನು ಮತ್ತೆ ಬೆಳ್ಳಗಾಗಿಸುವುದಿಲ್ಲ. ಅದರ ಬದಲು ಈ ಕೆಲವು ಮನೆಮದ್ದುಗಳು ಹೆಚ್ಚಿನ ಲಾಭ ನೀಡುತ್ತದೆ.

ಆಲೂಗಡ್ಡೆಯನ್ನು ತುರಿದು ಒಂದು ಚಮಚದಷ್ಟು ರಸ ತೆಗೆಯಿರಿ. ಕೂದಲನ್ನು ಮೇಲೆ ಕಟ್ಟಿ ಹಾಗೂ ಕುತ್ತಿಗೆಯ ಹಿಂಭಾಗ ಹಾಗೂ ಮುಂಭಾಗಕ್ಕೆ ಚೆನ್ನಾಗಿ ಹಚ್ಚಿ, 15 ನಿಮಿಷ ಬಳಿಕ ಕುತ್ತಿಗೆ ತೊಳೆಯಿರಿ. ಆಲೂಗಡ್ಡೆ ಸಿಪ್ಪೆಯಿಂದ ಮಸಾಜ್ ಮಾಡಿಕೊಂಡರೂ ಇದೇ ಲಾಭವನ್ನು ಪಡೆಯಬಹುದು.

ಕಡಲೆ ಹಿಟ್ಟಿಗೆ ಎರಡು ಚಮಚ ಹಾಲು ಹಾಗು ಚಿಟಿಕೆ ಅರಶಿನ ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಕುತ್ತಿಗೆಯ ಸುತ್ತಲೂ ಹಚ್ಚಿ ಮಸಾಜ್ ಮಾಡಿ. 10 ನಿಮಿಷ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಕತ್ತಿನ ಸುತ್ತ ತೊಳೆದುಕೊಳ್ಳಿ.

ನಿಂಬೆಹಣ್ಣಿನಿಂದಲೂ ಇದೇ ಲಾಭವನ್ನು ಪಡೆಯಬಹುದು. ಮುಳ್ಳುಸೌತೆಯನ್ನು ವರ್ತುಲಾಕಾರದಲ್ಲಿ ಕತ್ತರಿಸಿ ಕತ್ತಿನ ಸುತ್ತ ಇಡುತ್ತಾ ಬನ್ನಿ. ಇಲ್ಲವಾದರೆ ಮುಳ್ಳುಸೌತೆ ರಸಕ್ಕೆ ಅಲೋವೇರಾ ಜೆಲ್ ಮಿಶ್ರಣ ಮಾಡಿ ಕತ್ತಿನ ಭಾಗಕ್ಕೆ ಹಚ್ಚಿ. ಇದು ಕೂಡಾ ಅತ್ಯುತ್ತಮ ಲಾಭ ನೀಡುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...