Kannada Duniya

Ginger for pregnant women: ಗರ್ಭಾವಸ್ಥೆಯಲ್ಲಿ ಶುಂಠಿ ಬಳಸಿದರೆ ಏನಾಗುತ್ತದೆ ಗೊತ್ತಾ…?

ಶುಂಠಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿದೆ. ಹಾಗಾಗಿ ಇದನ್ನು ಅನೇಕ ಮನೆಮದ್ದುಗಳಲ್ಲಿ ಬಳಸುತ್ತಾರೆ. ಇದು ಅನೇಕ ರೋಗಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ಶುಂಠಿಯನ್ನು ಗರ್ಭಿಣಿಯರು ಸೇವಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಶುಂಠಿಯನ್ನು ಗರ್ಭಿಣಿಯರು ಸೇವಿಸಿದರೆ ಗರ್ಭಾವಸ್ಥೆಯಲ್ಲಿ ಕಾಡುವಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ನೋವನ್ನು ಕಡಿಮೆ ಮಾಡುತ್ತದೆ. ಹಾಗೇ ಇದು ವಾಕರಿಕೆ , ವಾಂತಿ ಸಮಸ್ಯೆಯನ್ನು ನಿಭಾಯಿಸಲು ಸಹಕಾರಿಯಾಗಿದೆ. ಅಲ್ಲದೇ ಇದು ಸಂಧಿವಾತ ಮತ್ತು ಭುಜದ ನೋವನ್ನು ಕಡಿಮೆ ಮಾಡುತ್ತದೆ. ಹಾಗೇ ಶುಂಠಿ ಹೊಟ್ಟೆ ನೋವಿನ ಸಮಸ್ಯೆಯನ್ನು ದೂರಮಾಡುತ್ತದೆ.

Tips for Pregnant working women : ಉದ್ಯೋಗಸ್ಥ ಮಹಿಳೆಯರು ಗರ್ಭಿಣಿಯಾದಾಗ ಈ ಕ್ರಮ ಪಾಲಿಸಿ…!

ಆರೋಗ್ಯ ತಜ್ಞರ ಪ್ರಕಾರ ಗರ್ಭಿಣಿಯರು ದಿನಕ್ಕೆ ಒಂದು ಗ್ರಾಂನಷ್ಟು ಶುಂಠಿಯನ್ನು ಸೇವಿಸಬಹುದು. ಹಾಗೇ ಇವರು ಶುಂಠಿ ರಸ ಅಥವಾ ಶುಂಠಿ ಜಗಿದು ತಿನ್ನಬಹುದು, ಅಥವಾ ಶುಂಠಿಯಿಂದ ಕಷಾಯ ತಯಾರಿಸಿ ಸೇವಿಸಬಹುದು. ಇದರಿಂದ ಗರ್ಭಾವಸ್ಥೆಯಲ್ಲಿ ಕಾಡುವಂತಹ ಸಮಸ್ಯೆಗಳು ಕಡಿಮೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...