Kannada Duniya

Guru Graha: ಫೆಬ್ರವರಿ 22ರಂದು ಗುರುವು ಅಸ್ತಮಿಸಲಿದೆ; ಈ ರಾಶಿಯವರಿಗೆ ತೊಂದರೆಯಾಗಲಿದೆ…!

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ ಅದು ಮಾನವರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದರಂತೆ ಫೆಬ್ರವರಿ 22ರಂದು ಗುರು ಗ್ರಹವು ಅಸ್ತಮಿಸಲಿದೆ. ಇದರಿಂದ ಈ ರಾಶಿಯವರಿಗೆ ತೊಂದರೆಯಾಗಲಿದೆ.

ಗುರುವು ಅಸ್ತಮಿಸುವುದರಿಂದ ಕಟಕ, ಮೀನ, ಸಿಂಹ ಮತ್ತು ಧನು ರಾಶಿಯವರಿಗೆ ತೊಂದರೆಯಾಗಲಿದೆ. ಹಾಗಾಗಿ ಇವರು ಈ ಸಮಯಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದನ್ನು ತಪ್ಪಿಸಬೇಕು. ಈ ಸಮಯದಲ್ಲಿ ನಿಮ್ಮ ಶತ್ರುಗಳು ಮೇಲುಗೈ ಸಾಧಿಸುತ್ತಾರೆ. ಹಾಗೇ ಇವರು ತಮ್ಮ ಮಾತಿನ ಮೇಲೆ ನಿಯಂತ್ರಣವನ್ನಿಟ್ಟುಕೊಳ್ಳಬೇಕು. ಇವರು ಈ ವೇಳೆ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಾರೆ.

Tips for Pregnant working women : ಉದ್ಯೋಗಸ್ಥ ಮಹಿಳೆಯರು ಗರ್ಭಿಣಿಯಾದಾಗ ಈ ಕ್ರಮ ಪಾಲಿಸಿ…!

ಹಾಗಾಗಿ ಇದನ್ನು ಪರಿಹರಿಸಲು ಗುರುವಾರದಂದು ‘ಓಂ ಬೃಹಸ್ಪತೇ ನಮಃ’ ಮಂತ್ರವನ್ನು 108 ಬಾರಿ ಜಪಿಸಿ. ಇದಲ್ಲದೇ ಚಿನ್ನ, ಅರಿಶಿನ, ಹೆಸರುಬೇಳೆ, ಮಾವಿನಕಾಯಿ ಮುಂತಾದ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಿ. ವಿಷ್ಣುವಿಗೆ ಹಳದಿ ಬಟ್ಟೆಗಳನ್ನು ಅರ್ಪಿಸಿ.

ಗುರುವಾರ ಉಪವಾಸವನ್ನು ಆಚರಿಸಿ. ಬಡ ಮಕ್ಕಳಿಗೆ ಪುಸ್ತಕವನ್ನು ದಾನ ಮಾಡಿ. ಹಾಗೇ ಹಣೆಯ ಮೇಲೆ ಹಳದಿ ಬಣ್ಣದ ತಿಲಕವನ್ನು ಹಚ್ಚಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...