Kannada Duniya

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ರನ್ನಿಂಗ್ ಮಾಡುವುದು ಒಳ್ಳೆಯದೇ?

ಇತ್ತೀಚಿನ ದಿನಗಳಲ್ಲಿ ಜನರು ಫಿಟ್ ಆಗಿ ಆರೋಗ್ಯವಾಗಿರಲು ವ್ಯಾಯಾಮಗಳನ್ನು ಮಾಡುತ್ತಾರೆ. ಕೆಲವರು ಸಂಜೆಯ ವೇಳೆ ವ್ಯಾಯಾಮ ಮಾಡಿದರೆ ಕೆಲವರು ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡುತ್ತಾರೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ರನ್ನಿಂಗ್ ಮಾಡುವುದು ಒಳ್ಳೆಯದೇ? ಎಂಬುದನ್ನು ತಿಳಿದುಕೊಳ್ಳಿ.

ದೇಹದಲ್ಲಿ ಬೊಜ್ಜಿನ ಸಮಸ್ಯೆ ಇರುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ರನ್ನಿಂಗ್ ಮಾಡುವುದು ಒಳ್ಳೆಯದು. ಇದರಿಂದ ಹೆಚ್ಚುವರು ಕೊಬ್ಬು ಕರಗುತ್ತದೆ. ಬೊಜ್ಜು ನಿವಾರಣೆಯಾಗುತ್ತದೆ. ಬೆಳಿಗ್ಗೆ ರನ್ನಿಂಗ್ ಮಾಡುವುದರಿಂದ ಹೃದಯ ವೇಗವಾಗಿ ರಕ್ತವನ್ನು ಪಂಪ್ ಮಾಡುತ್ತದೆ. ಇದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಇದು ಜೀರ್ಣಕ್ರಿಯೆಗೂ ಒಳ್ಳೆಯದು ಮತ್ತು ಇದರಿಂದ ನಿಮಗೆ ಉತ್ತಮ ನಿದ್ರೆ ಬರುತ್ತದೆ.

ಆದರೆ ಕೆಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ರನ್ನಿಂಗ್ ಮಾಡುವುದರಿಂದ ದೇಹಕ್ಕೆ ತ್ವರಿತವಾಗಿ ಆಯಾಸವಾಗುತ್ತದೆ. ಇದರಿಂದ ದೇಹ ದಣಿಯುತ್ತದೆ. ಇದರಿಂದ ದೇಹ ಬೇಗನೆ ಅನಾರೋಗ್ಯಕ್ಕೆ ಒಳಗಾಗುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ರನ್ನಿಂಗ್ ಮಾಡುವಾಗ ಆಯಾಸಗೊಳ್ಳುವವರು ಬಾಳೆಹಣ್ಣು ಸೇವಿಸಿ ಅಥವಾ ಎನರ್ಜಿ ಡ್ರಿಂಕ್ ಕುಡಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...