Kannada Duniya

ಮಳೆಗಾಲದಲ್ಲಿ ಸೇವಿಸಿ ಪಾಲಕ್ ಸೊಪ್ಪು….!

ಮಳೆಗಾಲ ಆರಂಭವಾಗುತ್ತಿದ್ದಂತೆ ತಾಜಾ ಪಾಲಕ್ ಸೊಪ್ಪು ಗಳು ಮಾರುಕಟ್ಟೆಯಲ್ಲಿ ದಂಡಿಯಾಗಿ ದೊರೆಯುತ್ತದೆ. ಇದನ್ನು ಬಳಸುವ ಮುನ್ನ ಸ್ವಚ್ಛವಾಗಿ ತೊಳೆಯುವುದು ಬಹಳ ಮುಖ್ಯ ಎಂಬುದು ನೆನಪಿರಲಿ.

ಬಸಳೆ ಅಷ್ಟೇ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಇತರ ಪೋಷಕಾಂಶಗಳನ್ನು ಒಳಗೊಂಡಿರುವ ಪಾಲಕ್ ಸೊಪ್ಪಿನಿಂದ ಹಲವು ವೈವಿಧ್ಯಗಳನ್ನು ತಯಾರಿಸಬಹುದು. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಸಾಕಷ್ಟಿರುವುದರಿಂದ ಇದು ದೇಹತೂಕ ಇಳಿಸುವವರ ಫೇವರಿಟ್ ಡಿಶ್ ಕೂಡ ಹೌದು. ಡಯಟ್ ಪ್ಲಾನ್ ನಲ್ಲಿ ಇರುವವರು ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಪಾಲಕ್ ಸೊಪ್ಪಿನಿಂದ ತಯಾರಿಸಿದ ಜ್ಯೂಸ್ ಕುಡಿಯುವುದರಿಂದ ದೇಹದ ತೂಕ ಬಹುಬೇಗ ಕಡಿಮೆಯಾಗುತ್ತದೆ. ಅದು ದೇಹಕ್ಕೆ ಯಾವುದೇ ಪೌಷ್ಟಿಕಾಂಶಗಳ ಕೊರತೆಯಾಗದಂತೆಯೂ ನೋಡಿಕೊಳ್ಳುತ್ತದೆ.

ಪಾಲಕ್ ಸೊಪ್ಪಿನಲ್ಲಿ ಒಮೆಗಾ-3 ಅಂಶಗಳು ಇರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಇರುವವರು ಇದರ ಸೇವನೆ ಮಾಡುವುದು ಬಹಳ ಒಳ್ಳೆಯದು. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಿ ಹೃದಯವನ್ನು ಬಲಿಷ್ಠಗೊಳಿಸುತ್ತದೆ.

ತೂಕ ಇಳಿಸಲು ಪುದೀನಾವನ್ನು ಈ ರೀತಿ ಸೇವಿಸಿ

ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ನಿಮ್ಮ ತ್ವಚೆಗೆ ವಿಶೇಷ ಹೊಳಪು ನೀಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಮುಖದ ಕಲೆಯನ್ನು ದೂರಮಾಡಿ ತ್ವಚೆ ಹೊಳೆಯುವಂತೆ ಮಾಡುತ್ತದೆ.

Eating Spinach during monsoons leads to many health benefits


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...