Kannada Duniya

ಚಳಿಗಾಲದಲ್ಲಿ ಬಾಳೆಹಣ್ಣು ಸೇವನೆ ಮಾಡಬಹುದಾ…? ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯಾ…!

ಚಳಿಗಾಲದಲ್ಲಿ ಬಾಳೆಹಣ್ಣು ಸೇವನೆ ಮಾಡುವುದರಿಂದ ಎದೆಯಲ್ಲಿ ಕಫ ಕಟ್ಟುತ್ತದೆ ಎಂದು ಹಿರಿಯರು ಹೇಳಿರುವುದು ನಿಮಗೆ ಬಿದ್ದಿರಬಹುದು. ಆದರೆ
ನಿಯಮಿತವಾಗಿ ಬಾಳೆಹಣ್ಣನ್ನು ಸೇವನೆ ಮಾಡುತ್ತಾ ಬರುವುದರಿಂದ ದೇಹ ಸದೃಢವಾಗುವ ಜೊತೆಗೆ ದೇಹಕ್ಕೆ ತ್ವರಿತ ಶಕ್ತಿಯು ದೊರೆಯುತ್ತದೆ.

ಬಾಳೆಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅಂಶವೆಂದು ಪ್ರತಿನಿತ್ಯ ಇದನ್ನು ಸೇವನೆ ಮಾಡುತ್ತಾ ಇರುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ ಹಾಗೂ ಹೃದಯದ ಆರೋಗ್ಯ ಸುಧಾರಿಸುತ್ತದೆ. ರಕ್ತದೊತ್ತಡದಂತಹ ಸಮಸ್ಯೆಯಿಂದ ಬಳಲುವವರು ನಿತ್ಯ ಇದನ್ನು ಸೇವನೆ ಮಾಡುತ್ತಾ ಬಂದರೆ ಉತ್ತಮ ಫಲಿತಾಂಶ ಪಡೆಯುತ್ತಾರೆ.

ಚಳಿಗಾಲದಲ್ಲಿ ಇದನ್ನು ಸೇವನೆ ಮಾಡುವುದರಿಂದ ಶೀತ ಸಂಬಂಧಿಸಿದ ಸೋಂಕುಗಳು ವೃದ್ಧಿಯಾಗುವುದಿಲ್ಲ ಅದರ ಬದಲು ದೂರವಾಗುತ್ತವೆ. ಇದರಲ್ಲಿರುವ
ಫೈಬರ್ ಅಂಶ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಸೇವನೆಯ ಪ್ರಮಾಣ ಒಂದರಿಂದ ಎರಡಕ್ಕೆ ಸೀಮಿತವಾಗಿರಬೇಕು.

ಮಕ್ಕಳಿಗೂ ನಿತ್ಯ ಬಾಳೆಹಣ್ಣು ತಿನ್ನಲು ಕೊಡುವುದರಿಂದ ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗುತ್ತವೆ ಹಾಗೂ ದೇಹಕ್ಕೆ ಅಗತ್ಯವಿರುವ ಪೊಟ್ಯಾಶಿಯಂ, ಮೆಗ್ನೀಷಿಯಮ್ ಗಳು ದೊರೆಯುತ್ತವೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...