Kannada Duniya

ಗರ್ಭಿಣಿಯರು ಪೇರಳೆ ಹಣ್ಣು ಸೇವಿಸುವುದರಿಂದ ಏನಾಗುತ್ತದೆ ಗೊತ್ತೇ?

ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ, ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾದ್ರೆ ಗರ್ಭಿಣಿಯರು ಪೇರಳೆ ಹಣ್ಣು ಸೇವಿಸಬಹುದೇ? ಎಂಬುದನ್ನು ತಿಳಿಯಿರಿ.

ಗರ್ಭಾವಸ್ಥೆಯಲ್ಲಿ ಪೇರಳೆ ಹಣ್ಣು ಸೇವನೆ ಆರೋಗ್ಯಕ್ಕೆ ಹಲವು ಪ್ರಯೋಜನವನ್ನು ನೀಡುತ್ತದೆ. ಇದರಲ್ಲಿ ಫೈಬರ್ ಅಂಶ ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆನ್ನು ಉತ್ತಮವಾಗಿಡುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ.

ಇದರಲ್ಲಿ ವಿಟಮಿನ್ ಸಿ, ಕೆ ಪೊಟ್ಯಾಶಿಯಂ, ಫೋಲೆಟ್ ಸೇರಿದಂತೆ ಹಲವು ಪೋಷಕಾಂಶಗಳಿದ್ದು, ಇದು ಭ್ರೂಣದ ಬೆಳವಣಿಗೆಗೆ ಸಹಕಾರಿಯಾಗಿದೆ. ಮತ್ತು ಇದು ಗರ್ಭಿಣಿಯರಿಗೆ ಶಕ್ತಿಯನ್ನು ನಿಡುತ್ತದೆ.

ಇದು ಹೆಚ್ಚು ನೀರಿನಾಂಶವನ್ನು ಹೊಂದಿರುವುದರಿಂದ ಇದು ದೇಹದಲ್ಲಿ ನೀರಿನಾಂಶವನ್ನು ಹೆಚ್ಚಿಸುತ್ತದೆ. ಇದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ ಮತ್ತು ಗರ್ಭಚೀಲದಲ್ಲಿ ನೀರಿನ ಮಟ್ಟವನ್ನು ಸಮ ಪ್ರಮಾಣದಲ್ಲಿಡಲು ಸಹಾಯ ಮಾಡುತ್ತದೆ.

ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...