Kannada Duniya

ಮುಟ್ಟಾದಾಗ ಕೊರೋನಾ ವ್ಯಾಕ್ಸಿನ್ ಹಾಕಿಸಬಹುದೇ?

ತಿಂಗಳ ರಜೆಯ ಅವಧಿಯಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಬಹುದಾ ಎಂಬುದು ಹಲವರ ಪ್ರಶ್ನೆ. ನಿಮ್ಮ ಸಂಶಯಕ್ಕೆ ಇಲ್ಲಿ ಉತ್ತರವಿದೆ ಕೇಳಿ.

ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ಮುಟ್ಟಿನ ಅವಧಿಯಲ್ಲಿ ಏರುಪೇರಾದ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಇದು ವ್ಯಕ್ತಿಯ ದೇಹದ ರೋಗ ನಿರೋಧಕ ಶಕ್ತಿಯನ್ನು ಅವಲಂಬಿಸಿರುತ್ತದೆ ಎಂಬುದನ್ನು ನೀವು ನೆನಪಿಟ್ಟುಕೊಳ್ಳಿ.

ಕೊರೋನಾ ವ್ಯಾಕ್ಸಿನ್ ಅನ್ನು ತಿಂಗಳ ರಜೆಯ ದಿನಗಳಲ್ಲಿಯೂ ತೆಗೆದುಕೊಳ್ಳಬಹುದು. ಕೆಲವರಿಗೆ ಇದರಿಂದ ಹೆಚ್ಚಿನ ರಕ್ತಸ್ರಾವವಾಗಬಹುದು, ಇನ್ನು ಕೆಲವರಿಗೆ ಬಹುಬೇಗ ನಿಂತು ಹೋಗಬಹುದು. ಮುಂದಿನ ತಿಂಗಳ ಮುಟ್ಟಿನ ಅವಧಿಯಲ್ಲೂ ಬದಲಾವಣೆಗಳು ಕಂಡು ಬಂದೀತು.

ಕೆಲವರಿಗೆ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ನೋವು ತೀವ್ರವಾದ ಉದಾಹರಣೆಗಳು ನಮ್ಮ ಮುಂದಿದೆ. ಆದರೆ ಇದರಿಂದ ನೇರವಾಗಿ ಅಥವಾ ಎಲ್ಲರಿಗೂ ಸಮಸ್ಯೆಗಳಾಗಿವೆ ಎನ್ನುವಂತಿಲ್ಲ ಎಂಬುದು ಗಮನಿಸಬೇಕಾದ ಅಂಶ. ಮುಟ್ಟಿಗೂ ವ್ಯಾಕ್ಸಿನ್ ಗೂ ಯಾವುದೇ ನೇರ ಸಂಬಂಧವಿಲ್ಲ.

corona vaccination during periods


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...