Kannada Duniya

ಕಬ್ಬಿಣದ ಬಾಣಲೆಯಲ್ಲಿ ಅಡುಗೆ ಮಾಡಿ ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ಕಾಡುವುದಿಲ್ಲವೇ?

ಕೆಲವರು ಅಡುಗೆಗೆ ಕಬ್ಬಿಣದ ಬಾಣಲೆಯನ್ನು ಬಳಸುತ್ತಾರೆ. ಕಬ್ಬಿಣದ ಬಾಣಲೆಯನ್ನು ಅಡುಗೆಗೆ ಬಳಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಇದರಲ್ಲಿ ಬೇಯಿಸಿದ ಆಹಾರ ಸೇವಿಸಿದರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಾಡುವುದಿಲ್ಲ ಎಂದು ಹೇಳುತ್ತಾರೆ. ಇದು ನಿಜವೇ? ಎಂಬುದನ್ನು ತಿಳಿಯಿರಿ.

ತಜ್ಞರು ತಿಳಿಸಿದ ಪ್ರಕಾರ ಕಬ್ಬಿಣದ ಬಾಣಲೆಯಲ್ಲಿ ಆಹಾರ ಬೇಯಿಸಿ ತಿಂದರೆ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ಕಬ್ಬಿಣಾಂಶ ದೊರೆಯುತ್ತದೆಯಂತೆ. ಇದರಲ್ಲಿ ಆಹಾರ ಬೇಯಿಸಿದಾಗ ಆಹಾರವು ಕಬ್ಬಿಣಾಂಶವನ್ನು ಹೀರಲ್ಪಡುತ್ತದೆ. ಇದನ್ನು ಸೇವಿಸಿದಾಗ ದೇಹಕ್ಕೆ ಕಬ್ಬಿಣಾಂಶ ಸಿಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಹಾಗೇ ಕಬ್ಬಿಣಾಂಶದ ಕೊರತೆ ಇರುವವರು ಕಬ್ಬಿಣದ ಬಾಣಲೆಯಲ್ಲಿ ಆಹಾರ ಬೇಯಿಸಿ ತಿಂದರೆ ಸಾಕಾಗುವುದಿಲ್ಲ. ಅದರ ಜೊತೆಗೆ ಕಬ್ಬಿಣಾಂಶ ಸಮೃದ್ಧವಾಗಿರುವಂತಹ ಬೀಟ್ ರೋಟ್, ದಾಳಿಂಬೆ, ಪಾಲಕ್, ಹಾಗೂ ವಿಟಮಿನ್ ಸಿ ಸಮೃದ್ಧವಾಗಿರುವಂತಹ, ಕಿತ್ತಳೆ, ನಿಂಬೆ, ಸೇವಿಸಿ. ಮತ್ತು ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...