Kannada Duniya

ಹಸಿರು, ಕೆಂಪು, ಕಿತ್ತಳೆ, ಹಳದಿ ಕ್ಯಾಪ್ಸಿಕಂನಲ್ಲಿ ಯಾವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಗೊತ್ತೇ…?

ಮಾರುಕಟ್ಟೆಯಲ್ಲಿ ಹಲವು ವಿಧದ ತರಕಾರಿಗಳು ಕಂಡುಬರುತ್ತದೆ. ಹಾಗೇ ಕ್ಯಾಪ್ಸಿಕಂ ಹಸಿರು, ಕೆಂಪು, ಕಿತ್ತಳೆ, ಹಳದಿ ಮುಂತಾದ ಬಣ್ಣಗಳಲ್ಲಿ ಕಂಡುಬರುತ್ತದೆ. ಆದರೆ ಇವುಗಳಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ತಿಳಿಯಿರಿ.

ಕೆಂಪು ಕ್ಯಾಪ್ಸಿಕಂ : ಇದರಲ್ಲಿ ಕ್ಯಾಪ್ಸೈಸಿನ್ ಮತ್ತು ಕ್ಯಾರೋಟಿನಾಯ್ಡ್ ಗಳು ಕಂಡುಬರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಸಿರು ಕ್ಯಾಪ್ಸಿಕಂ : ಇದರಲ್ಲಿ ವಿಟಮಿನ್ ಸಿ ಮತ್ತು ಕ್ಲೋರೊಫಿಲ್ ಇರುತ್ತದೆ. ಇದು ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಳದಿ ಕ್ಯಾಪ್ಸಿಕಂ : ಇದು ಕ್ಯಾರೋಟಿನಾಯ್ಡ್ ಗಳನ್ನು ಹೊಂದಿದ್ದು, ಇದು ಕಣ್ಣುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ರೆಟಿನಾದ ಆರೋಗ್ಯವನ್ನು ಕಾಪಾಡುತ್ತದೆ.

ಕಿತ್ತಳೆ ಬಣ್ಣದ ಕ್ಯಾಪ್ಸಿಕಂ : ಇದರಲ್ಲಿ ಬೀಟಾ ಕ್ಯಾರೋಟಿನ್ ಕಂಡುಬರುತ್ತದೆ. ಇದು ಕಣ್ಣುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಬೆನ್ನು ನೋವಿನೊಂದಿಗೆ ಈ ಲಕ್ಷಣಗಳಿದ್ದರೆ ಎಂದಿಗೂ ನಿರ್ಲಕ್ಷ್ಯ ಬೇಡ..!

ಆದರೆ ಕೆಂಪು ಕ್ಯಾಪ್ಸಿಕಂ ನಲ್ಲಿ ಎಲ್ಲಾ ಕ್ಯಾಪ್ಸಿಕಂನಲ್ಲಿರುವ ಪೋಷಕಾಂಶಗಳು ದುಪ್ಪಟ್ಟಾಗಿದೆ. ಹಾಗಾಗಿ ಇದು ಹೆಚ್ಚು ಆರೋಗ್ಯಕ್ಕೆ ಪ್ರಯೋಜನಕಾರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...