Kannada Duniya

ಸೈನಸ್ ಸೋಂಕನ್ನು ತಪ್ಪಿಸಲು ಈ ಸಲಹೆ ಪಾಲಿಸಿ….!

ಸೈನಸ್ ನಿಮ್ಮ ಹಣೆ, ಕೆನ್ನೆ ಮತ್ತು ಕಣ್ಣುlಗಳ ನಡುವಿನ ಟೊಳ್ಳಾದ ಪ್ರದೇಶವಾಗಿದೆ. ಇದು ಲೋಳೆಯನ್ನು ಉತ್ಪಾದಿಸುತ್ತದೆ. ಇದರಿಂದ ಇದು ಮಾಲಿನ್ಯಕಾರಕಗಳು ಮತ್ತು ಧೂಳಿನಿಮದ ರಕ್ಷಣೆ ನೀಡುತ್ತದೆ. ಇದಕ್ಕೆ ಸೋಂಕು ತಗುಲಿದರೆ ತಲೆನೋವು, ಶೀತದ ಸಮಸ್ಯೆ ಕಾಡುತ್ತದೆ. ಹಾಗಾಗಿ ಸೈನಸ್ ಸೋಂಕನ್ನು ತಪ್ಪಿಸಲು ಈ ಸಲಹೆ ಪಾಲಿಸಿ.

ಸೈನಸ್ ಸೋಂಕನ್ನು ತಪ್ಪಿಸಲು ಸಾಕಷ್ಟು ನೀರನ್ನು ಕುಡಿಯಿರಿ. ದೇಹ ಹೈಡ್ರೇಟ್ ಆಗಿದ್ದರೆ ಸೈನಸ್ ಸಮಸ್ಯೆ ಕಾಡುವುದಿಲ್ಲ.

ಸೈನಸ್ ಸಮಸ್ಯೆಯನ್ನು ತಪ್ಪಿಸಲು ಕೆಲವು ನೈಸರ್ಗಿಕ ಎಣ್ಣೆಗಳನ್ನು ಬಳಸಿ. ನೀಲಗಿರಿಯಂತಹ ನೈಸರ್ಗಿಕ ತೈಲಗಳು ಸೈನಸ್ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಿಂದ ನೀವು ಬೇಗನೆ ಚೇತರಿಸಿಕೊಳ್ಳಬಹುದು.

ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿರುವ ಆಹಾರ ಸೇವಿಸಿ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಹಾಗಾಗಿ ಈರುಳ್ಳಿ, ಗ್ರೀನ್ ಟೀ, ಶುಂಠಿ ಮುಂತಾದವುಗಳನ್ನು ಸೇವಿಸಿ.

ನೀವು ಇದನ್ನು ಮಾಡಿದರೆ ಕಣ್ಣಿನ ಸುತ್ತಲಿನ ಕಪ್ಪು ವೃತ್ತಗಳು ಕಣ್ಮರೆಯಾಗುತ್ತವೆ….!

ಸೈನಸ್ ಸಮಸ್ಯೆಯನ್ನು ತೊಲಗಿಸಲು ಬಿಸಿ ನೀರಿನಿಂದ ಸ್ಟೀಮ್ ನೀಡಿ. ಇದು ಸೈನಸ್ ನರಗಳಲ್ಲಿ ಉಂಟಾದ ಬ್ಲಾಕ್ ಅನ್ನು ನಿವಾರಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...