Kannada Duniya

ಮಕ್ಕಳು ಓದುವ ಮುನ್ನ ಹೀಗೆ ಮಾಡಿ ನೋಡಿ….!

ಎಷ್ಟು ಹೊತ್ತು ಪುಸ್ತಕ ಹಿಡಿದು ಕುಳಿತರು ತಲೆಯೊಳಗೆ ಏನೂ ಉಳಿಯುತ್ತಿಲ್ಲ ಎನ್ನುವ ಪೋಷಕರ ಪೈಕಿ ನೀವು ಕೂಡ ಒಬ್ಬರಾಗಿದ್ದರೆ ಇಲ್ಲಿ ಕೇಳಿ. ಮಕ್ಕಳು ಎಷ್ಟು ಓದುತ್ತಾರೋ ಅಷ್ಟೇ ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಕೂಡ ಮುಖ್ಯ.

ಮಕ್ಕಳಿಗೆ ಸರಿಯಾದ ದೈಹಿಕ ವ್ಯಾಯಾಮ ಸಿಗದೇ ಹೋದಲ್ಲಿ ಅದು ನೆನಪಿನ ಶಕ್ತಿಯ ಮೇಲು ಪರಿಣಾಮ ಬೀರುತ್ತದೆ. ಹಾಗಾಗಿ ಅಂಕಗಳಿಗೆ ಹಾಗೂ ದೈಹಿಕ ಚಟುವಟಿಕೆ ಒಂದಕ್ಕೊಂದು ಸಂಬಂಧ ಹೊಂದಿದೆ.

ದಿನವಿಡೀ ಬಾಗಿಲು ಮುಚ್ಚಿದ ಕೊಠಡಿಯೊಳಗೆ ಕೂತು ಓದುತ್ತಾ ಇದ್ದರೆ ಮಕ್ಕಳ ತಲೆಯಲ್ಲಿ ಯಾವುದು ಉಳಿಯುವುದಿಲ್ಲ. ಇತ್ತೀಚಿಗೆ ನಡೆದ ಅಧ್ಯಯನ ಒಂದು ಈ ಮಾತನ್ನು ಪುಷ್ಟಿಕರಿಸಿದೆ. ಸ್ವಲ್ಪ ವ್ಯಾಯಾಮ ಮಾಡಿದ ಬಳಿಕ ಓದಲು ಕುಳಿತುಕೊಳ್ಳುವ ಮಕ್ಕಳ ಮೆದುಳು ವೇಗವಾಗಿ ಕೆಲಸ ಮಾಡುತ್ತದೆ. ವ್ಯಾಯಾಮದಿಂದ ಮೆದುಳಿಗೆ ರಕ್ತದ ಹರಿವು ಹೆಚ್ಚುತ್ತದೆ. ಇದು ನ್ಯೂರಾನ್ಗಳನ್ನು ಸಕ್ರಿಯಗೊಳಿಸುತ್ತದೆ. ದೈಹಿಕವಾಗಿ ಸಕ್ರಿಯವಾಗಿರುವ ಮಕ್ಕಳು ಅಧ್ಯಯನದತ್ತ ಹೆಚ್ಚು ಗಮನ ನೀಡುತ್ತಾರೆ.

ಕುಂಬಳಕಾಯಿ ಬೀಜವನ್ನು ಸೇವಿಸಿ ಈ ಆರೋಗ್ಯ ಪ್ರಯೋಜನವನ್ನು ಪಡೆಯಿರಿ….!

ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಮಕ್ಕಳಿಗೆ ಏರೋಬಿಕ್ಸ್ ಅತ್ಯುತ್ತಮ ವ್ಯಾಯಾಮ. ಇದು ಬೇಡ ಎನ್ನುವವರು ಸೈಕ್ಲಿಂಗ್, ಜಾಗಿಂಗ್ ಅಥವಾ ಓಟದಂತ ವ್ಯಾಯಾಮಗಳಲ್ಲಿ ತೊಡಗಿ ಕೊಳ್ಳಬಹುದು. ಸ್ವಲ್ಪ ಹೊತ್ತು ಓದುವ ಮಕ್ಕಳು ವಾಕಿಂಗ್ ಮಾಡಿ ಬಳಿಕ ಓದಲು ಕುಳಿತುಕೊಳ್ಳಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...