Kannada Duniya

ಮಕ್ಕಳಿಗೆ ಜ್ವರವಿದ್ದಾಗ ಯಾವ ಆಹಾರ ನೀಡಿದರೆ ಒಳ್ಳೆಯದು….?

ಜ್ವರದಿಂದ ಬಳಲುವ ಮಕ್ಕಳು ಯಾವುದೇ ಆಹಾರವನ್ನು ಸೇವಿಸಲು ಇಷ್ಟಪಡುವುದಿಲ್ಲ. ಹಾಗೆಂದು ಅವರನ್ನು ಹಾಗೆ ಬಿಟ್ಟರೆ ಅಥವಾ ಖಾಲಿ ಹೊಟ್ಟೆಯಲ್ಲಿ ಬಿಟ್ಟರೆ ಗ್ಯಾಸ್ಟ್ರಿಕ್, ನಿಶ್ಯಕ್ತಿ ಸೇರಿದಂತೆ ಇತರ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಅವಧಿಯಲ್ಲಿ ಮಕ್ಕಳಿಗೆ ಸಂಪೂರ್ಣ ವಿಶ್ರಾಂತಿ ನೀಡುವುದರ ಜೊತೆಗೆ ಈ ಕೆಲವು ವಸ್ತುಗಳನ್ನು ಆಹಾರದೊಂದಿಗೆ ಸೇರಿಸಲು ಪ್ರಯತ್ನಿಸಿ.

ಜ್ವರ ಬಂದಾಗ ಮಕ್ಕಳಿಗೆ ಪದೇಪದೇ ಬಿಸಿ ನೀರು ಕುಡಿಸುವ ಮುಖ್ಯ. ಅದೇ ಅವಧಿಯಲ್ಲಿ ಚಿಟಿಕೆ ಅರಿಶಿನ ಪುಡಿ ಬೆರೆಸಿ ಕುಡಿಯಲು ಕೊಟ್ಟರೆ ಇದು ಸೋಂಕುಗಳನ್ನು ಎದುರಿಸಲು ಹಾಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕರಿಬೇವಿನ ಎಲೆಗಳು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

ಬಾಳೆಹಣ್ಣು ಹಾಗೂ ವಾಲ್ನೆಟ್ ಮಿಲ್ಕ್ ಶೇಕ್ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶಗಳು ದೊರೆಯುತ್ತವೆ ಹಾಗೂ ಇದು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಒಣ ಹಣ್ಣುಗಳನ್ನು ಮಕ್ಕಳಿಗೆ ಕುರುಕಲು ತಿಂಡಿಯಾಗಿ ಸೇವನೆ ಮಾಡಲು ಕೊಡುವುದರ ಮೂಲಕ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸಬಹುದು. ಒಣ ದ್ರಾಕ್ಷಿ ಅಥವಾ ಅಂಜೂರದ ಹಣ್ಣುಗಳು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ.

ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬಂದರೆ ಕಡೆಗಣಿಸಬೇಡಿ….!

ಜ್ವರ ಕಡಿಮೆಯಾದ ಬಳಿಕ ಹಣ್ಣು ಹಾಗೂ ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡುವ ಮೂಲಕ ಮತ್ತೆ ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಪೋಷಕರ ಜವಾಬ್ದಾರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...