Kannada Duniya

ದೀಪಾವಳಿ ಹಬ್ಬಕ್ಕೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಪಾಲಕ್ ಫೇಸ್ ಪ್ಯಾಕ್ ಹಚ್ಚಿ…!

ಹಬ್ಬದ ದಿನ ಸುಂದರವಾಗಿ ಕಾಣಲು ಎಲ್ಲರೂ ಪ್ರಯತ್ನಿಸುತ್ತಾರೆ. ಅದಕ್ಕಾಗಿ ಹಲವು ಬಗೆಯ ಕ್ರೀಂ ಅನ್ನು ಬಳಸುತ್ತಾರೆ. ಆದರೆ ನೀವು ದೀಪಾವಳಿ ಹಬ್ಬದ ದಿನ ಸುಂದರವಾಗಿ ಕಾಣಲು ಪಾಲಕ್ ಸೊಪ್ಪಿನ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ.

ಪಾಲಕ್ ಸೊಪ್ಪಿನಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಎ, ಸಿ ಮತ್ತು ಕೆ ಇದೆ. ಹಾಗೇ ಇದರಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಫೋಲೇಟ್ ಕಂಡುಬರುತ್ತದೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿ. ಹಾಗಾಗಿ ಪಾಲಕ್ ನಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿ.

ಚಳಿಗಾಲದಲ್ಲಿ ನಿಮ್ಮ ಮುಖಕ್ಕೆ ಕ್ರೀಂ ಹಚ್ಚುವ ಬದಲು ಈ ಎಣ್ಣೆಯನ್ನು ಹಚ್ಚಿ….!

ಪಾಲಕ್ ಸೊಪ್ಪನ್ನು ತೆಗೆದುಕೊಂಡು ಅದಕ್ಕೆ ಮೊಸರನ್ನು ಸೇರಿಸಿ ರುಬ್ಬಿ ಪ್ಯಾಕ್ ತಯಾರಿಸಿ ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ. ಹಾಗೇ ಪಾಲಕ್ ಸೊಪ್ಪಿನ ಪೇಸ್ಟ್ ಗೆ ಜೇನುತುಪ್ಪ, ತೆಂಗಿನೆಣ್ಣೆಯನ್ನು ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...