Kannada Duniya

ಚಹಾ, ಕಾಫಿಯ ಬದಲು ಈ ಆರೋಗ್ಯಕರ ಪಾನೀಯ ಸೇವಿಸಿ ನಿಮ್ಮ ದೇಹವನ್ನು ಶಕ್ತಿಯುತವಾಗಿರಿಸಿ….!

ಬೆಳಿಗ್ಗೆ ಎದ್ದ ತಕ್ಷಣ ಹೆಚ್ಚಿನ ಜನರು ತಮ್ಮ ದಿನವನ್ನು ಚಹಾ, ಕಾಫಿ ಕುಡಿಯುವ ಮೂಲಕ ಪ್ರಾರಂಭಿಸುತ್ತಾರೆ. ಆದರೆ ಚಹಾ, ಕಾಫಿಯಲ್ಲಿ ಕೆಪೀನ್ ಅಂಶವಿದೆ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಅದರ ಬದಲು ಈ ಆಹಾರವನ್ನು ಸೇವಿಸಿ.

ಹಣ್ಣಿನ ರಸ : ಬೆಳಿಗ್ಗೆ ಹಣ್ಣಿನಿಂದ ತಯಾರಿಸಿದ ತಾಜಾ ರಸವನ್ನು ಕುಡಿಯಿರಿ. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದರಿಂದ ನೀವು ದಿನವಿಡೀ ಉಲ್ಲಾಸದಿಂದ ಇರಬಹುದು.

ನಿಂಬೆ ಪಾನಕ : ಇದನ್ನು ಬೆಳಿಗ್ಗೆ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಗ್ಯಾಸ್, ಅಜೀರ್ಣ ಮತ್ತು ಆಮ್ಲೀಯತೆ ಸಮಸ್ಯೆಯನ್ನು ಉಂಟುಮಾಡುವುದಿಲ್ಲ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ತೆಂಗಿನ ನೀರು : ಇದರಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು, ಪ್ರೋಟೀನ್, ಸೋಡಿಯಂ, ಫೈಬರ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ಕುಡಿಯುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆಯಂತೆ.

ನೀವು ಪ್ರೀತಿಸುತ್ತಿರುವ ವ್ಯಕ್ತಿಯ ಜೊತೆ ಈ ವಿಚಾರಗಳನ್ನು ಹಂಚಿಕೊಳ್ಳಬೇಡಿ….!

ಮಜ್ಜಿಗೆ : ಇದು ಹೊಟ್ಟೆಯಲ್ಲಿರುವ ಶಾಖವನ್ನು ತಣ್ಣಗಾಗಿಸುತ್ತದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...