Kannada Duniya

ಚಳಿಗಾಲದಲ್ಲಿ ಮಕ್ಕಳ ಕಾಳಜಿಯನ್ನು ಈ ರೀತಿಯಾಗಿ ಮಾಡಿ!

ಹವಾಮಾನ ಬದಲಾದಂತೆ ಮಕ್ಕಳಲ್ಲಿ ಕೆಮ್ಮು, ನೆಗಡಿ ಕಾಣಿಸಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಚಳಿಯ ಈ ಅವಧಿಯಲ್ಲಿ ಮಕ್ಕಳ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ.

ಪ್ರತೀ ಬಾರಿ ನೆಗಡಿ, ಕೆಮ್ಮು ಕಾಣಿಸಿಕೊಂಡಾಗ ವೈದ್ಯರ ಬಳಿ ತೆರಳುವ ಬದಲು ಮಕ್ಕಳಿಗೆ ಸಾಕಷ್ಟು ನೀರು ಕುಡಿಯುವ ಅಭ್ಯಾಸ ಮಾಡಿ.ದೇಹ ನಿರ್ಜಲೀಕರಣಗೊಂಡಾಗ ರೋಗಗಳು ಬಹುಬೇಗ ಆವರಿಸಿಕೊಳ್ಳುತ್ತವೆ. ಮಕ್ಕಳಿಗೆ ಸೂಪ್, ಜ್ಯೂಸ್ ಕೊಡುವುದನ್ನು ಕಡಿಮೆ ಮಾಡಿ.

ಕಫ ಹೆಚ್ಚಿದೆ, ಕೆಮ್ಮು ಕೂಡಾ ವಿಪರೀತವಿದೆ ಎಂದಾದಾಗ ಮಕ್ಕಳನ್ನು ಬಿಸಿನೀರಿನ ಹಬೆಗೆ ಒಡ್ಡಿಕೊಳ್ಳುವಂತೆ ಮಾಡಿ. ಇದರಿಂದ ಗಟ್ಟಿಯಾಗಿರುವ ಕಫ ನೀರಾಗುತ್ತದೆ.

ಶುಂಠಿ ಹಾಗು ಜೇನುತುಪ್ಪವನ್ನು ಮಕ್ಕಳಿಗೆ ತಿನ್ನಲು ಕೊಡುವುದರಿಂದ ದೇಹ ಉಷ್ಣತೆ ಗಳಿಸಿಕೊಳ್ಳುತ್ತದೆ ಮತ್ತು ಚಳಿ ದೂರವಾಗುತ್ತದೆ. ಮಳಿಗೆಗಳಲ್ಲಿ ಸಿಗುವ ಒಣ ಶುಂಠಿ ಪುಡಿಯನ್ನು ತಂದಿಟ್ಟುಕೊಂಡು ಚಮಚಕ್ಕೆ ಚಿಟಿಕೆ ಪುಡಿ ಸೇರಿಸಿ ಅರ್ಧ ಚಮಚದಷ್ಟು ಜೇನುತುಪ್ಪ ಬೆರೆಸಿದರೆ ಸಾಕು. ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...