Kannada Duniya

ಕೆಮ್ಮು ಇದ್ದಾಗ ನಿಂಬೆ, ಕಿತ್ತಳೆ ಸೇವಿಸಿದರೆ ಏನಾಗುತ್ತದೆ ಗೊತ್ತಾ?

ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಜ್ವರ, ಕೆಮ್ಮು, ಶೀತದ ಸಮಸ್ಯೆ ಕಾಡುತ್ತದೆ. ಅದರೆಲ್ಲೂ ಕೆಮ್ಮು ಒಮ್ಮೆ ಬಂದರೆ ತುಂಬಾ ದಿನಗಳ ತನಕ ಕಾಡುತ್ತದೆ. ಹಾಗಾಗಿ ಕೆಮ್ಮು ಇದ್ದಾಗ ಕೆಲವು ಆಹಾರವನ್ನು ಸೇವಿಸಬಾರದು. ಇದರಿಂದ ಕೆಮ್ಮು ಹೆಚ್ಚಾಗುತ್ತದೆಯಂತೆ.

ಕೆಮ್ಮು ಇದ್ದಾಗ ಸಿಟ್ರಸ್ ಆಮ್ಲವಿರುವಂತಹ ಪದಾರ್ಥಗಳನ್ನು ಸೇವಿಸಬೇಡಿ. ಇದು ಕೆಮ್ಮನ್ನು ಹೆಚ್ಚಿಸುತ್ತದೆಯಂತೆ. ಹಾಗಾಗಿ ನಿಂಬೆ, ಕಿತ್ತಳೆ, ಅನಾನಸ್ ಮುಂತಾದ ಹುಳಿ ಹಣ್ಣುಗಳನ್ನು ಸೇವಿಸಬೇಡಿ. ಕೆಮ್ಮು ಇದ್ದಾಗ ಇವುಗಳನ್ನು ತಪ್ಪಿಸಿ.

ಹಾಗೇ ಕೆಮ್ಮು ಇದ್ದಾಗ ತಂಪಾದ ಹಣ್ಣುಗಳು ಮತ್ತು ತಂಪು ಪಾನೀಯಗಳು ಮತ್ತು ಫ್ರಿಜ್ ನಲ್ಲಿಟ್ಟ ಆಹಾರವನ್ನು ಸೇವಿಸಬೇಡಿ. ಇದು ಕೆಮ್ಮನ್ನು ಹೆಚ್ಚಿಸುತ್ತದೆ. ಅಲ್ಲದೇ ಕೆಚಪ್ , ಕರಿದ ಪದಾರ್ಥಗಳನ್ನು ಸೇವಿಸಬೇಡಿ. ಇದು ಕೆಮ್ಮನ್ನು ಹೆಚ್ಚಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...