Kannada Duniya

ಉಗುರು ಕೆಂಪಾದರೆ ಈ ರೋಗದ ಸೂಚನೆಯಂತೆ

ದೇಹದ ಪ್ರತಿಯೊಂದು ಅಂಗಗಳು ನಮ್ಮಲ್ಲಿರುವಂತಹ ರೋಗಗಳ ಬಗ್ಗೆ ಸೂಚನೆ ನೀಡುತ್ತದೆಯಂತೆ. ಅದರಂತೆ ಉಗುರಿನ ಬಣ್ಣ ಬದಲಾದರೆ ಅದು ನಮ್ಮ ದೇಹದಲ್ಲಿ ಯಾವ ರೋಗವಿದೆ ಎಂಬುದನ್ನು ತಿಳಿಸುತ್ತದೆಯಂತೆ. ಹಾಗಾದ್ರೆ ಈ ಬಗ್ಗೆ ತಿಳಿದುಕೊಳ್ಳಿ.

ಉಗುರುಗಳು ಕೆಂಪಾದರೆ ಇದು ಉರಿಯೂತದ ಸಮಸ್ಯೆಯನ್ನು ಸೂಚಿಸುತ್ತದೆಯಂತೆ. ಅಲ್ಲದೇ ಉಗುರುಗಳು ಹಳದಿ ಬಣ್ಣದಲ್ಲಿದ್ದರೆ ಅದು ದೇಹದಲ್ಲಿ ವಿಟಮಿನ್ ಬಿ, ಪ್ರೋಟೀನ್ ಮತ್ತು ಸತುವಿನ ಕೊರತೆಯನ್ನು ಸೂಚಿಸುತ್ತದೆ. ಕೆಲವೊಮ್ಮೆ ಉಗುರುಗಳು ಹಳದಿಯಾಗುವುದು ಕಾಮಾಲೆ ರೋಗವನ್ನು ಸೂಚಿಸುತ್ತದೆ.

ಉಗುರುಗಳಲ್ಲಿ ನೀಲಿ ಮತ್ತು ಕಪ್ಪು ಬಣ್ಣದಲ್ಲಿದ್ದರೆ ದೇಹದಲ್ಲಿ ರಕ್ತ ಪರಿಚಲನೆಯಲ್ಲಿ ಸಮಸ್ಯೆ ಇದೆ ಎಂಬುದನ್ನು ತಿಳಿಸುತ್ತದೆ. ಹಾಗೇ ಇದು ಹೃದಯದ ಸಮಸ್ಯೆಯನ್ನು ಸೂಚಿಸುತ್ತದೆ.

ಹಾಗೇ ಉಗುರುಗಳು ಬಿಳಿ ಬಣ್ಣದಲ್ಲಿದ್ದರೆ ಕಿಡ್ನಿ ಮತ್ತು ಲಿವರ್ ಸಮಸ್ಯೆಯನ್ನು ಸೂಚಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...