Kannada Duniya

ಇವುಗಳಲ್ಲಿ ನಿಮ್ಮ ತಲೆನೋವು ಯಾವುದು….?

ತಲೆನೋವಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಆಗೊಮ್ಮೆ ಈಗೊಮ್ಮೆ ಮಾತ್ರ ಕಾಣಿಸಿಕೊಳ್ಳುವ ತಲೆನೋವು ರಾತ್ರಿ ಮಲಗಿ ಬೆಳಗ್ಗೆ ಏಳುವ ವೇಳೆ ಕಡಿಮೆಯಾಗಿರುತ್ತದೆ. ಆದರೆ ಕೆಲವು ತಲೆನೋವುಗಳು ದಿನ ಕಳೆದು ವಾರವಾದರೂ ನಿಮ್ಮನ್ನು ಬಿಟ್ಟು ದೂರವಾಗುವುದಿಲ್ಲ.

ಸೈನಸ್ ಕೂಡಾ ಅವುಗಳ ಪೈಕಿ ಒಂದು. ಮೊದಲಿಗೆ ನಿಮ್ಮ ಕೆನ್ನೆ, ಹಣೆ ಹಾಗೂ ಮೂಗಿನ ಮೇಲ್ಭಾಗದಲ್ಲಿ ತೀಕ್ಷ್ಣವಾದ ನೋವು ಕಾಣಿಸಿಕೊಳ್ಳುತ್ತದೆ. ಬಳಿಕ ತಲೆನೋವು ಕಿವಿ ನೋವು ಹಾಗೂ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರ ಪರಿಹಾರಕ್ಕೆ ನೀವು ತಜ್ಞರನ್ನು ಕಾಣುವುದು ಅನಿವಾರ್ಯ.

ಡಿಹೈಡ್ರೇಶನ್ ಕಾರಣದಿಂದಲೂ ತಲೆನೋವು ಕಾಣಿಸಿಕೊಳ್ಳುತ್ತದೆ. ಅತಿಯಾದ ಬಾಯಾರಿಕೆ, ತಲೆ ತಿರುಗುವಿಕೆ ಇದರ ಲಕ್ಷಣ. ಸಾಕಷ್ಟು ನೀರು ಕುಡಿಯುವುದು, ನೀರಿನಂಶ ಹೆಚ್ಚಿರುವ ವಸ್ತುಗಳನ್ನು ಸೇವಿಸುವುದು ಇದಕ್ಕೆ ಪರಿಹಾರ.

ಏಲಕ್ಕಿ ಜೀವನದ ಎಲ್ಲಾ ಅಡೆತಡೆಗಳನ್ನು ಚಿಟಿಕೆಯಲ್ಲಿ ನಿವಾರಿಸುತ್ತದೆ, ಈ ಕ್ರಮಗಳನ್ನು ಅನುಸರಿಸಿ….!

ಮೈಗ್ರೇನ್ ತಲೆನೋವಂತೂ ದಿನನಿತ್ಯದ ಕೆಲಸಗಳಿಗೂ ಅಡ್ಡಿಯುಂಟುಮಾಡುತ್ತದೆ. ತಿಂಗಳಲ್ಲಿ ನಾಲ್ಕಾರು ಬಾರಿ ಕಾಣಿಸುವ ಇದರಿಂದ ವಿಪರೀತ ತಲೆನೋವು, ವಾಂತಿ, ಹೊಟ್ಟೆನೋವುಗಳು ಉಂಟಾಗುತ್ತವೆ. ಹಸಿವಾದಾಗಲೂ ತಲೆನೋವು ಕಾಣಿಸಿಕೊಳ್ಳುತ್ತದೆ ಎಂಬುದು ನಿಮಗೆ ನೆನಪಿರಲಿ. ಹಾಗಾಗಿ ಸರಿಯಾದ ಸಮಯದಲ್ಲಿ ಉತ್ತಮ ಆಹಾರ ಸೇವನೆಯೂ ಬಹಳ ಮುಖ್ಯ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...