Kannada Duniya

ದೇಹದಲ್ಲಿ ಇವುಗಳ ಕೊರತೆಯಾದರೆ ತುಂಬಾ ಹಸಿವಾಗುತ್ತದೆಯಂತೆ

ಕೆಲವರಿಗೆ ಪದೇ ಪದೇ ಹಸಿವಾಗುತ್ತಿರುತ್ತದೆ. ಆದರೆ ಕೆಲವರಿಗೆ ಎಷ್ಟು ಹೊತ್ತಾದರೂ ಹಸಿವಾಗುವುದಿಲ್ಲ. ಆದರೆ ನಿಮಗೆ ಪದೇ ಪದೇ ಹಸಿವಾಗುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಇದು ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ ನಿಮಗೆ ಅತಿಯಾಗಿ ಹಸಿವಾಗಲು ದೇಹದಲ್ಲಿ ಇವುಗಳ ಕೊರತೆಯೇ ಕಾರಣವಂತೆ.

ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಕೊರತೆಯಾದರೆ ಆಗ ನಿಮಗೆ ಪದೇ ಪದೇ ಹಸಿವಾಗುತ್ತಿರುತ್ತದೆಯಂತೆ.

ಅಲ್ಲದೇ ನಿಮ್ಮ ದೇಹದಲ್ಲಿ ನೀರಿನ ಕೊರತೆಯಾದರೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮವನ್ನು ಬೀರುತ್ತದೆಯಂತೆ. ಇದರಿಂದ ನಿಮಗೆ ಆಗಾಗ ಹಸಿವಾಗುತ್ತಿರುತ್ತದೆಯಂತೆ. ಹಾಗಾಗಿ ಸಾಕಷ್ಟು ನೀರನ್ನು ಕುಡಿಯಿರಿ.

ದೇಹದಲ್ಲಿ ಪ್ರೋಟೀನ್ ಕೊರತೆಯಾದರೆ ಕೂಡ ಮತ್ತೆ ಮತ್ತೆ ಹಸಿವಾಗುತ್ತದೆಯಂತೆ. ಪ್ರೋಟೀನ್ ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುತ್ತದೆ. ಇದರಲ್ಲಿ ಕೊರತೆಯಾದರೆ ಹೊಟ್ಟೆ ಖಾಲಿಯಾಗುತ್ತದೆ.

ತೂಕ ಕಳೆದುಕೊಳ್ಳಲು ಜನರು ಕಡಿಮೆ ಕ್ಯಾಲೋರಿ ಆಹಾರವನ್ನು ಸೇವಿಸುತ್ತಾರೆ. ಆದರೆ ದೇಹಕ್ಕೆ ಅಗತ್ಯವಾದ ಕ್ಯಾಲೋರಿ ಸಿಗದಿದ್ದಾಗ ಹಸಿವಾಗಲು ಶುರುವಾಗುತ್ತದೆ. ಹಾಗಾಗಿ ಕ್ಯಾಲೋರಿ ಭರಿತ ಆಹಾರ ಸೇವಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...