Kannada Duniya

ಚಿಕ್ಕ ಮಕ್ಕಳ ಹಸಿವನ್ನು ಹೆಚ್ಚಿಸಲು ಇವುಗಳನ್ನು ತಿನ್ನಲು ನೀಡಿ…!

ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಹಾಗಾಗಿ ಅವರ ಹಸಿವನ್ನು ಹೆಚ್ಚಿಸಲು ಅವರಿಗೆ ಇದನ್ನು ತಿನ್ನಲು ನೀಡಿ.

-ಸೇಬು : ಇದು ಮಕ್ಕಳ ಹಸಿವನ್ನು ಹೆಚ್ಚಿಸಲು ಸಹಕಾರಿ. ಸೇಬು ಹಣ್ಣಿನ ಸಿಪ್ಪೆ ತೆಗೆದು ಅದಕ್ಕೆ ಕಪ್ಪು ಉಪ್ಪನ್ನು ಮಿಕ್ಸ್ ಮಾಡಿ ಮಕ್ಕಳಿಗೆ ತಿನ್ನಲು ನೀಡಿ. ಇದರಿಂದ ಅವರ ಜೀರ್ಣಕ್ರಿಯೆ ಉತ್ತಮವಾಗಿ ಅವರಿಗೆ ಹಸಿವು ಹೆಚ್ಚಾಗುತ್ತದೆ.

-ಕ್ಯಾರೆಟ್ : ಇದು ಕೂಡ ಮಕ್ಕಳಲ್ಲಿ ಹಸಿವನ್ನು ಹೆಚ್ಚಿಸುತ್ತದೆ. ದಿನಕ್ಕೆ ಒಂದು ಕ್ಯಾರೆಟ್ ಅನ್ನು ತಿನ್ನಲು ನೀಡಿ ಅಥವಾ ಜ್ಯೂಸ್ ಮಾಡಿ ಕುಡಿಸಿದರೆ ಅವರ ಹಸಿವು ಹೆಚ್ಚಾಗುತ್ತದೆ.

-ಹಸಿರು ತರಕಾರಿ : ಇದರಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಮಕ್ಕಳಲ್ಲಿ ಹಸಿವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ.

-ಏಲಕ್ಕಿ, ಶುಂಠಿ, ಕಾಳುಮೆಣಸು : ಈ ಮಸಾಲೆ ಪದಾರ್ಥಗಳು ಕೂಡ ಮಕ್ಕಳ ಹಸಿವನ್ನು ಹೆಚ್ಚಿಸಲು ಸಹಾಯಮಾಡುತ್ತವೆ. ಹಾಗಾಗಿ ತುಳಸಿ ಎಲೆಗಳಿಗೆ ಇವುಗಳನ್ನು ಮಿಕ್ಸ್ ಮಾಡಿ ಮಕ್ಕಳಿಗೆ ನೀಡಿದರೆ ಅವರ ಹಸಿವು ಹೆಚ್ಚಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...