Kannada Duniya

ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು ಆಯುರ್ವೇದದ ಈ ಸಲಹೆ ಪಾಲಿಸಿ….!

ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ , ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅದರಲ್ಲೂ ಹೃದಯದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬೇಕು. ಅದಕ್ಕಾಗಿ ಆಯುರ್ವೇದದಲ್ಲಿ ತಿಳಿಸಿದ ಈ ಸಲಹೆ ಪಾಲಿಸಿ.

ಕೊತ್ತಂಬರಿ ಬೀಜಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗಾಗಿ ಕೊತ್ತಂಬರಿ ಬೀಜಗಳು ಅಥವಾ ಸೊಪ್ಪನ್ನು ಸೇವಿಸಿ. ಇದರಲ್ಲಿರುವ ಪೋಷಕಾಂಶಗಳು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಹಾಕುತ್ತದೆ.

ದೇಹದಲ್ಲಿ ಕಫವನ್ನು ನಿಯಂತ್ರಿಸಿ. ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾದಾಗ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ.

ಹಾಗೇ ಮೆಂತ್ಯ ಬೀಜಗಳನ್ನು ಸೇವಿಸಿ. ಇದರಲ್ಲಿ ಹಲವು ಪೋಷಕಾಂಶಗಳಿದ್ದು, ಇದು ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಅನ್ನು ನಿವಾರಿಸುತ್ತದೆ.

 ಆಯುರ್ವೇದದ ಪ್ರಕಾರ, ರಾತ್ರಿ ಊಟದಲ್ಲಿ ಏನು ಸೇರಿಸಬಾರದು ಗೊತ್ತಾ…?

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಪ್ರತಿದಿನ ಯೋಗಾಸನ ಮಾಡಿ. ಪ್ರಾಣಾಯಾಮ, ಶಿರ್ಶಾಸನ, ಮಯೂರಾಸನದಂತಹ ಆಸನಗಳನ್ನು ಮಾಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...