Kannada Duniya

Carrot Payasam: ಮಕ್ಕಳಿಗೆ ಇಷ್ಟವಾಗುವ ‘ಕ್ಯಾರೆಟ್ ಪಾಯಸ’ ತಯಾರಿಸಿ…!

ಕ್ಯಾರೆಟ್ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಕ್ಕಳು ಮಾತ್ರ ಇದನ್ನು ತಿನ್ನುವುದಕ್ಕೆ ಅಷ್ಟಾಗಿ ಇಷ್ಟಪಡಲ್ಲ. ಪಾಯಸ ಇಷ್ಟಪಡುವ ಮಕ್ಕಳಿಗೆ ಕ್ಯಾರೆಟ್ ಬಳಸಿ ರುಚಿಯಾಗಿ ಪಾಯಸ ಮಾಡಿಕೊಟ್ಟರೆ ತಿನ್ನುತ್ತಾರೆ. ಇಲ್ಲಿ ಬೆಲ್ಲ ಬಳಸಿ ಮಾಡುವ ರುಚಿಯಾದ ಕ್ಯಾರೆಟ್ ಪಾಯಸದ ವಿಧಾನವಿದೆ ನೋಡಿ.

ಬೇಕಾಗುವ ಪದಾರ್ಥಗಳು : 3 ಹದ ಗಾತ್ರದ –ಕ್ಯಾರೆಟ್ (ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿದ್ದು), ½ ಟೀ ಸ್ಪೂನ್- ಏಲಕ್ಕಿ ಪುಡಿ, 1 ಕಪ್- ದಪ್ಪಗಿನ ತೆಂಗಿನಕಾಯಿ ಹಾಲು, 1 ಕಪ್- ತೆಳು ತೆಂಗಿನಕಾಯಿ ಹಾಲು, ½ ಕಪ್- ಬೆಲ್ಲದ ಪುಡಿ, ½ ಕಪ್- ನೀರು, ಸ್ವಲ್ಪ- ಒಣ ದ್ರಾಕ್ಷಿ, ಸ್ವಲ್ಪ-ಗೋಡಂಬಿ, 3 ಟೇಬಲ್ ಸ್ಪೂನ್- ತುಪ್ಪ.

ಈ ಆಹಾರದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿದರೆ ಆಯಾಸ, ದೌರ್ಬಲ್ಯ ಸಮಸ್ಯೆ ಕಾಡಲ್ಲ…!

ಮಾಡುವ ವಿಧಾನ : ಕ್ಯಾರೆಟ್ ಗೆ ಅಗತ್ಯವಿರುವಷ್ಟು ನೀರು ಹಾಕಿ ಮೃದುವಾಗುವವರೆಗೆ ಬೇಯಿಸಿಕೊಳ್ಳಿ. ಬೆಲ್ಲಕ್ಕೆ ½ ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬೆಲ್ಲ ಕರಗಿದ ಮೇಲೆ ಅದನ್ನು ಸೋಸಿಕೊಳ್ಳಿ. ಕ್ಯಾರೆಟ್ ಬೆಂದ ಮೇಲೆ ಅದು ತಣ್ಣಗಾಗಲು ಬಿಡಿ. ನಂತರ ಮಿಕ್ಸಿಗೆ ಬೆಂದ ಕ್ಯಾರೆಟ್ ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಒಂದು ಅಗಲವಾದ ಬಾಣಲೆಗೆ ರುಬ್ಬಿದ ಕ್ಯಾರೆಟ್, ಸೋಸಿಕೊಂಡ ಬೆಲ್ಲದ ಮಿಶ್ರಣ, ತೆಳು ತೆಂಗಿನಕಾಯಿ ಹಾಲು ಹಾಕಿ ಗ್ಯಾಸ್ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ ಕುದಿಸುವುದು ಬೇಡ.

ನಿಧಾನಕ್ಕೆ ಕುದಿ ಬರಲು ಶುರುವಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ ದಪ್ಪಗಿನ ತೆಂಗಿನಕಾಯಿ ಹಾಲು ಸೇರಿಸಿ ಮಿಕ್ಸ್ ಮಾಡಿ. ನಂತರ ತುಪ್ಪವನ್ನು ಒಂದು ಸೌಟಿಗೆ ಹಾಕಿ ಗ್ಯಾಸ್ ಮೇಲೆ ಇಡಿ. ಅದಕ್ಕೆ ದ್ರಾಕ್ಷಿ, ಗೋಡಂಬಿ ಹಾಕಿ ಫ್ರೈ ಮಾಡಿ ಇದನ್ನು ಪಾಯಸಕ್ಕೆ ಹಾಕಿ ಏಲಕ್ಕಿ ಪುಡಿ ಸೇರಿಸಿದರೆ ರುಚಿಯಾದ ಕ್ಯಾರೆಟ್ ಪಾಯಸ ಸವಿಯಲು ಸಿದ್ಧ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...