Kannada Duniya

ಸಿರಿಧಾನ್ಯದ ಈ ಇಡ್ಲಿ ಒಮ್ಮೆ ತಿಂದರೆ ಪದೇ ಪದೇ ಮಾಡಿಕೊಂಡು ಸವಿಯುತ್ತೀರಿ!

ಸಾಮಾನ್ಯವಾಗಿ ಮನೆಯಲ್ಲಿ ಇಡ್ಲಿ ಮಾಡಿಕೊಂಡು ಸವಿಯುತ್ತಿರುತ್ತೇವೆ.ಆದರೆ ಈಗ ಹೆಚ್ಚಿನ  ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಅದರಲ್ಲೂ ಸಿರಿಧಾನ್ಯದತ್ತ ಜನರು ಒಲವು ಹೆಚ್ಚಾಗಿದೆ. ಇಲ್ಲಿ ಊದಲನ್ನು ಬಳಸಿ ಮಾಡಬಹುದಾದ ರುಚಿಕರವಾದ ಇಡ್ಲಿ ಇದೆ. ಒಮ್ಮೆ ಮಾಡಿಕೊಂಡು ತಿಂದರೆ ಪದೇ ಪದೇ ಮಾಡಿ ಸವಿಯುತ್ತೀರಿ.

ಬೇಕಾಗುವ ಸಾಮಗ್ರಿಗಳು

1 ಕಪ್ ಉದ್ದಿನಬೇಳೆ, 2 ಕಪ್- ಊದಲು, ¼ ಕಪ್-ಬಾರ್ಲಿ, ¼ ಕಪ್-ಅನ್ನ.

ಮಾಡುವ ವಿಧಾನ

ಮೊದಲಿಗೆ ಉದ್ದಿನಬೇಳೆ ಹಾಗೂ ಬಾರ್ಲಿಯನ್ನು ಚೆನ್ನಾಗಿ ತೊಳೆದು 6 ಗಂಟೆಗಳ ಕಾಲ ನೆನೆಸಿಕೊಳ್ಳಿ. ಹಾಗೇ ಊದಲನ್ನು ಕೂಡ ಚೆನ್ನಾಗಿ ತೊಳೆದು ನೆನೆಸಿಟ್ಟುಕೊಳ್ಳಿ. ಮೊದಲಿಗೆ ಬಾರ್ಲಿ ಹಾಗೂ ಉದ್ದಿನಬೇಳೆಯನ್ನು ನಯವಾಗಿ ರುಬ್ಬಿಕೊಳ್ಳಿ. ಬಳಿಕ ಊದಲನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಇದಾದ ನಂತರ ಅನ್ನವನ್ನು ಸ್ವಲ್ಪ ನೀರು ಬೆರೆಸಿ ನಯವಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ತುಸು ಉಪ್ಪು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಹುದುಗು ಬರಲು ಇಡಿ.

ಇಡ್ಲಿ ತಟ್ಟೆಗೆ ತುಪ್ಪ/ ಎಣ್ಣೆ ಸವರಿಕೊಂಡು ಹಿಟ್ಟು ಹಾಕಿ 20 ನಿಮಿಷಗಳ ಕಾಲ ಹದ ಉರಿಯಲ್ಲಿ ಬೇಯಿಸಿ. ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಲು ಚೆನ್ನಾಗಿರುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...