Kannada Duniya

ಮನೆಯಲ್ಲಿ ಮಾಡಿ ಹೋಟೆಲ್ ಶೈಲಿಯ ‘ಪಾಲಕ್ ಸೂಪ್’….!

ಹೋಟೆಲ್ ಗೆ ಹೋದಾಗ ಸೂಪ್ ಆರ್ಡರ್ ಮಾಡಿ ಕುಡಿಯುವ ಅಭ್ಯಾಸ ನಿಮಗಿದೆಯಾ…? ಮಕ್ಕಳಿಗಂತೂ ಈ ಸೂಪ್ ಅಂದರೆ ತುಂಬಾ ಇಷ್ಟವಿರುತ್ತದೆ. ಪದೇ ಪದೇ ಹೋಟೆಲ್ ಗೆ ಹೋಗಿ ಖರ್ಚು ಮಾಡುವುದಕ್ಕಿಂತ ಮನೆಯಲ್ಲಿ ರುಚಿಯಾದ, ಆರೊಗ್ಯಕರವಾದ ಪಾಲಕ್ ಸೂಪ್ ಮಾಡುವ ವಿಧಾನ ಕಲಿತುಕೊಳ್ಳಿ.

ಬೇಕಾಗುವ ಸಾಮಗ್ರಿಗಳು

2 ಕಪ್- ಪಾಲಕ್ ಸೊಪ್ಪು, ½ ಕಪ್- ಹಾಲು, ½ ಟೇಬಲ್ ಸ್ಪೂನ್- ಕಾರ್ನ್ ಫ್ಲೋರ್, ½ ಟೀ ಸ್ಪೂನ್-ಎಣ್ಣೆ, ½ ಟೀ ಸ್ಪೂನ್- ಬೆಣ್ಣೆ, 1/3 ಕಪ್- ಕತ್ತರಿಸಿದ ಈರುಳ್ಳಿ, ¼ ಇಂಚು-ಶುಂಠಿ, 2-ಎಸಳು-ಬೆಳ್ಳುಳ್ಳಿ, 1 ಕಪ್- ನೀರು, ¼ ಟೀ ಸ್ಪೂನ್- ಸಕ್ಕರೆ, ಉಪ್ಪು-ರುಚಿಗೆ ತಕ್ಕಷ್ಟು, ¼ ಟೀ ಸ್ಪೂನ್-ಕಾಳುಮೆಣಸಿನ ಪುಡಿ.

ಮಾಡುವ ವಿಧಾನ

ಮೊದಲಿಗೆ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನು ಕತ್ತರಿಸಿಕೊಳ್ಳಿ. ಹಾಲಿಗೆ ಕಾರ್ನ್ ಫ್ಲೋರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ನಂತರ ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ½ ಟೀ ಸ್ಪೂನ್ ಎಣ್ಣೆ, ½ ಟೀ ಸ್ಪೂನ್ ಬೆಣ್ಣೆ ಹಾಕಿ ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ, ಶುಂಠಿ, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಕೆಂಪಗಾದ ಬಳಿಕ ಪಾಲಕ್ ಸೊಪ್ಪನ್ನು ಸೇರಿಸಿ. ಇದು ನೀರು ಬಿಡುವವರೆಗೆ ಬಾಡಿಸಿಕೊಳ್ಳಿ. ನಂತರ ಅದಕ್ಕೆ 1 ಕಪ್ ನೀರು ಹಾಕಿ ಸಕ್ಕರೆ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 3 ನಿಮಿಷಗಳ ಕಾಲ ಕುದಿಸಿ ಗ್ಯಾಸ್ ಆಫ್ ಮಾಡಿ. ಇದು ತಣ್ಣಗಾದ ಬಳಿಕ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಒಂದು ಬಾಣಲೆಗೆ ಹಾಕಿ ಅದಕ್ಕೆ ಕಾರ್ನ್ ಫ್ಲೋರ್ ಮಿಶ್ರಣವನ್ನು ಸೇರಿಸಿ 2 ನಿಮಿಷಗಳ ಕಾಲ ಕೈಬಿಡದೇ ತಿರುವುತ್ತಾ ಇರಿ. ಹದ ಉರಿಯಲ್ಲಿ ಇದು ಕುದಿಯಲಿ.ನಂತರ ಕಾಳುಮೆಣಸಿನ ಪುಡಿ ಹಾಕಿ 5 ನಿಮಿಷಗಳ ಕಾಲ ಕುದಿಸಿದರೆ ರುಚಿಯಾದ ಪಾಲಕ್ ಸೂಪ್ ಸವಿಯಲು ಸಿದ್ಧ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...