Kannada Duniya

ಮಕ್ಕಳಿಗೆ ಸಖತ್ ಇಷ್ಟವಾಗುತ್ತೆ ಈ ಬ್ರೆಡ್ ಪನ್ನೀರ್ ರೋಲ್!

ಮಕ್ಕಳಿಗೆ ಬ್ರೆಡ್ ಕೊಟ್ಟರೆ ತಿನ್ನುವುದಕ್ಕೆ ಇಷ್ಟಪಡುವುದಿಲ್ಲ ಎನ್ನುವವರು ಬ್ರೆಡ್ ಬಳಸಿ ಮಾಡಬಹುದಾದ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ.ಮಕ್ಕಳು ಸ್ಕೂಲಿನಿಂದ ಬರುವಾಗ ಮಾಡಿಕೊಟ್ಟರೆ ಅವರೂ ಖುಷಿಯಿಂದ ತಿನ್ನುತ್ತಾರೆ. ಪನ್ನೀರ್ ಹಾಗೂ ಬ್ರೆಡ್ ಬಳಸಿ ಮಾಡಬಹುದಾದ ಈ ಸ್ನ್ಯಾಕ್ಸ್ ತುಂಬಾನೇ ಚೆನ್ನಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು

ಬ್ರೆಡ್ ಪೀಸ್-10, ಎಣ್ಣೆ-ಕರಿಯಲು ಅಗತ್ಯವಿರುವಷ್ಟು, 1 ಕಪ್- ಪನ್ನೀರ್ ತುರಿ, ¼ ಕಪ್- ಸ್ಪ್ರಿಂಗ್ ಆನಿಯನ್, 2 ದೊಡ್ಡ ಚಮಚದಷ್ಟು-ಹಸಿಮೆಣಸು (ಚಿಕ್ಕದಾಗಿ ಕತ್ತರಿಸಿದ್ದು), ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ

ಮೊದಲಿಗೆ ಒಂದು ಬೌಲ್ ಗೆ ಪನ್ನೀರ್ ತುರಿ, ಚಿಕ್ಕದಾಗಿ ಕತ್ತರಿಸಿದ ಸ್ಪ್ರಿಂಗ್ ಆನಿಯನ್, ಹಸಿಮಣಸು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇನ್ನೊಂದು ಬೌಲ್ ನಲ್ಲಿ ನೀರು ಇಟ್ಟುಕೊಳ್ಳಿ. ಬ್ರೆಡ್ ತುಂಡುಗಳನ್ನು ತೆಗದುಕೊಂಡು ಅದರ ಕಂದು ಬಣ್ಣದ ಭಾಗವನ್ನು ಕತ್ತರಿಸಿ ತೆಗೆದು ಬ್ರೆಡ್ ಗೆ ಸ್ವಲ್ಪ ನೀರು ಚಿಮುಕಿಸಿ ಅಂಗೈಯಿಂದ ನಿಧಾನಕ್ಕೆ ಒತ್ತಿ ನೀರನ್ನು ತೆಗೆಯಿರಿ. ನಂತರ ಪನ್ನೀರ್ ಮಿಶ್ರಣವನ್ನು ಸ್ವಲ್ಪ ತೆಗದುಕೊಂಡು ಬ್ರೆಡ್ ಮಧ್ಯೆದಲ್ಲಿಟ್ಟು ಅದನ್ನು ರೋಲ್ ಮಾಡಿ. ತುದಿ ಭಾಗವನ್ನು ಚೆನ್ನಾಗಿ ಸೀಲ್ ಮಾಡಿಕೊಳ್ಳಿ.ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟು ಮಾಡಿಟ್ಟುಕೊಂಡ ಒಂದೊಂದೇ ಬ್ರೆಡ್ ರೋಲ್ ಅನ್ನು ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಇದನ್ನು ಕೆಚಪ್ ಅಥವಾ ಪುದೀನಾ ಚಟ್ನಿ ಜೊತೆ ಸವಿಯಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...