Kannada Duniya

ಮಕ್ಕಳಿಗೆ ಮಾಡಿಕೊಡಿ ಈ ರುಚಿಯಾದ ಬಾಳೆಹಣ್ಣಿನ ಪ್ಯಾನ್ ಕೇಕ್

ಮಕ್ಕಳು ಸಂಜೆ ಸ್ಕೂಲ್ ಮುಗಿಸಿ ಬರುವಾಗ ಏನಾದರೂ ರುಚಿಯಾದ ತಿಂಡಿಯಿದ್ದರೆ ಅವರಿಗೆ ಖುಷಿಯಾಗುತ್ತದೆ. ಹಾಗಂತ ಅಂಗಡಿಯಿಂದ ತಂದ ತಿಂಡಿ ಕೊಡುವ ಬದಲು ಮನೆಯಲ್ಲಿಯೇ ಅವರಿಗೆ ಇಷ್ಟವಾಗುವ ಹಾಗೇ ರುಚಿಯಾದ, ಆರೋಗ್ಯಕರವಾದ ಪ್ಯಾನ್ ಕೇಕ್ ಮಾಡಿಕೊಡಿ.

ಬೇಕಾಗುವ ಸಾಮಗ್ರಿಗಳು

½ ಕಪ್- ಬೆಲ್ಲ, 2-ಬಾಳೆಹಣ್ಣು, ½ ಕಪ್- ತೆಂಗಿನಕಾಯಿ ತುರಿ, 2 ಟೇಬಲ್ ಸ್ಪೂನ್- ಎಳ್ಳು, ತುಪ್ಪ-ಸ್ವಲ್ಪ, ಜೇನುತುಪ್ಪ-ಸ್ವಲ್ಪ, 1 ½ ಕಪ್- ನೀರು, 1 ¼ ಕಪ್- ಅಕ್ಕಿ ಹಿಟ್ಟು, ಚಿಟಿಕೆ-ಏಲಕ್ಕಿ ಪುಡಿ, 1 ಟೀ ಸ್ಪೂನ್- ಬೇಕಿಂಗ್ ಪೌಡರ್, ಡ್ರೈ ಫ್ರೂಟ್ಸ್-ಚಿಕ್ಕದಾಗಿ ಕತ್ತರಿಸಿದ್ದು ಸ್ವಲ್ಪ.

ಮಾಡುವ ವಿಧಾನ

ಒಂದು ಪ್ಯಾನ್ ಗೆ ಬೆಲ್ಲವನ್ನು ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ಒಲೆಯ ಮೇಲೆ ಇಡಿ. ಬೆಲ್ಲ ಕರಗಿಸಿದ ಬಳಿಕ ಗ್ಯಾಸ್ ಆಫ್ ಮಾಡಿ. ಒಂದು ಬೌಲ್ ಗೆ ಬಾಳೆಹಣ್ಣನ್ನು ಹಾಕಿ ಚೆನ್ನಾಗಿ ಹಿಸುಕಿಕೊಳ್ಳಿ. ಅದಕ್ಕೆ ಅಕ್ಕಿ ಹಿಟ್ಟು, ತೆಂಗಿನಕಾಯಿ ತುರಿ, ಏಲಕ್ಕಿ ಪುಡಿ, ಎಳ್ಳು, ಬೇಕಿಂಗ್ ಪೌಡರ್, ಬೆಲ್ಲದ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟು ದೋಸೆ ಹಿಟ್ಟಿನ ಹದಕ್ಕೆ ಇರಲಿ. ತುಂಬಾ ತೆಳ್ಳಗಾಗುವುದು ಬೇಡ. ಒಲೆಯ ಮೇಲೆ ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ನಂತರ ಒಂದು ಸೌಟು ಹಿಟ್ಟು ಹಾಕಿ. ವೃತ್ತಾಕಾರವಾಗಿ ಹರಡಿ 3 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಎರಡೂ ಕಡೆ ಬೇಯಿಸಿಕೊಳ್ಳಿ. ಇದನ್ನು ಒಂದು ತಟ್ಟೆಗೆ ಹಾಕಿ ಅದರ ಮೇಲೆ ಜೇನುತುಪ್ಪ, ಡ್ರೈಫ್ರೂಟ್ಸ್ ಹಾಕಿದರೆ ರುಚಿಯಾದ ಬಾಳೆಹಣ್ಣಿನ ಪ್ಯಾನ್ ಕೇಕ್ ಸವಿಯಲು ಸಿದ್ಧ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...