Kannada Duniya

‘ಮಂಗಳೂರು ಶೈಲಿಯ ಚಿಕನ್ ಕರಿ’ ಮಾಡಿ ನೋಡಿ….!

ಚಿಕನ್ ಎಂದರೆ ಬಾಯಲ್ಲಿ ನೀರು ಬರುತ್ತದೆ ಕೆಲವರಿಗೆ. ಇಲ್ಲಿ ಮಂಗಳೂರು ಶೈಲಿಯ ಚಿಕನ್ ಕರಿ ಮಾಡುವ ವಿಧಾನ ಇದೆ. ಇದು ಬಿಸಿಬಿಸಿ ಅನ್ನದ ಜೊತೆ, ನೀರುದೋಸೆ ಜೊತೆ ಸವಿಯಲು ತುಂಬಾನೇ ಚೆನ್ನಾಗಿರುತ್ತದೆ.

ಚಿಕನ್-1 ಕೆಜಿ, ಕರಿಬೇವು-5 ಎಸಳು, ಅರಿಶಿನ-1/4 ಟೀ ಸ್ಪೂನ್, ಈರುಳ್ಳಿ-3, ಹುಣಸೆಹಣ್ಣಿನ ರಸ-1 ಟೇಬಲ್ ಸ್ಪೂನ್, ದಪ್ಪ ತೆಂಗಿನಕಾಯಿ ಹಾಲು-1/4 ಕಪ್, ಎಣ್ಣೆ-2 ಟೇಬಲ್ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ತುಪ್ಪ-1 ಟೇಬಲ್ ಸ್ಪೂನ್, ಬೆಳ್ಳುಳ್ಳಿ-3 ಎಸಳು, ತೆಂಗಿನಕಾಯಿ ತುರಿ-1/2 ಕಪ್, ಕೆಂಪುಮೆಣಸು-6, ಕಾಳುಮೆಣಸು-1 ಟೀ ಸ್ಪೂನ್, ಜೀರಿಗೆ-3/4 ಟೀ ಸ್ಪೂನ್, ಮೆಂತ್ಯ-1/4 ಟೀ ಸ್ಪೂನ್, ಧನಿಯಾ-1/2 ಟೇಬಲ್ ಸ್ಪೂನ್, ಲವಂಗ-2, ಚಕ್ಕೆ-1 ತುಂಡು.

ಮೊದಲಿಗೆ ಚಿಕನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಅರಿಶಿನ, 1 ಟಿ ಸ್ಪೂನ್ ಉಪ್ಪು ಹಾಕಿ ಮ್ಯಾರಿನೇಟ್ ಮಾಡಿಟ್ಟುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದರಲ್ಲಿ ಮೆಂತ್ಯ, ಜೀರಿಗೆ, ಕಾಳುಮೆಣಸು, ಲವಂಗ, ಚಕ್ಕೆ, ಕೆಂಪು ಮೆಣಸು ಇವೆಲ್ಲವನ್ನೂ ಹಾಕಿ ಡ್ರೈ ರೋಸ್ಟ್ ಮಾಡಿಕೊಳ್ಳಿ. ನಂತರ ಅದೇ ಪ್ಯಾನ್ ಗೆ ತುಪ್ಪ ಹಾಕಿ ಅದಕ್ಕೆ 1 ಕತ್ತರಿಸಿದ ಈರುಳ್ಳಿ ಹಾಕಿ ತುಸು ಫ್ರೈ ಮಾಡಿ ನಂತರ ಅದಕ್ಕೆ ಬೆಳ್ಳುಳ್ಳಿ, ತೆಂಗಿನಕಾಯಿ ತುರಿ ಸೇರಿಸಿ 5 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಮಿಕ್ಸಿ ಜಾರಿಗೆ ಹುರಿದಿಟ್ಟುಕೊಂಡ ಸಾಮಾಗ್ರಿ ಹಾಗೂ ತೆಂಗಿನಕಾಯಿ ಈರುಳ್ಳಿ, ಬೆಳ್ಳುಳ್ಳಿಯನ್ನು ಸೇರಿಸಿ ತುಸು ನೀರು ಬೆರೆಸಿ ನಯವಾದ ಪೇಸ್ಟ್ ಮಾಡಿಕೊಳ್ಳಿ.

ಗರ್ಭಾವಸ್ಥೆಯಲ್ಲಿ ಈ ವಸ್ತುವೊಂದನ್ನು ಸೇವಿಸಿದರೆ ಮಗುವಿನ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆಯಂತೆ…!

ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗುತ್ತಲೇ ಎರಡು ಈರುಳ್ಳಿಯನ್ನು ಕತ್ತರಿಸಿ ಹಾಕಿ ಅದು ಕಂದುಬಣ್ಣಕ್ಕೆ ಬರುತ್ತಲೇ ಚಿಕನ್ ಸೇರಿಸಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಇದಕ್ಕೆ ರುಬ್ಬಿದ ಮಸಾಲೆ, ಕರಿಬೇವು, ಉಪ್ಪು ಸೇರಿಸಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ 3 ಕಪ್ ನೀರು, ಹುಣಸೆಹಣ್ಣಿನ ಪೇಸ್ಟ್ ಸೇರಿಸಿ ಮಿಕ್ಸ್ ಮಾಡಿ 3 ನಿಮಿಷಗಳ ಕಾಲ ಜೋರು ಉರಿಯಲ್ಲಿ ಚಿಕನ್ ಅನ್ನು ಬೇಯಿಸಿಕೊಳ್ಳಿ.ಕೊನೆಗೆ ಇದಕ್ಕೆ ತೆಂಗಿನಕಾಯಿ ಹಾಲು ಹಾಕಿ ಮಿಕ್ಸ್ ಮಾಡಿ 1 ನಿಮಿಷ ಬಿಟ್ಟು ಗ್ಯಾಸ್ ಆಫ್ ಮಾಡಿದರೆ ರುಚಿಯಾದ ಚಿಕನ್ ಕರಿ ಸವಿಯಲು ಸಿದ್ಧ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...