Kannada Duniya

ಕೋಳಿ ಸೇವನೆಗೂ ಮುನ್ನ ಈ ವಿಷಯದ ಬಗ್ಗೆ ಇರಲಿ ಗಮನ!

ತರಕಾರಿ ಅಥವಾ ಹಣ್ಣುಗಳು ಎಲ್ಲವನ್ನೂ ತೊಳೆದು ತಿನ್ನುವ ಅಭ್ಯಾಸವಿರುವ ನಮ್ಮಲ್ಲಿ ಹೆಚ್ಚಿನವರಿಗೆ ಚಿಕನ್ ಅನ್ನು ತೊಳೆಯಬೇಕೋ ಬೇಡವೋ ಎಂಬ ಗೊಂದಲವಿರುತ್ತದೆ. ನಿಮ್ಮ ಸಂಶಯಕ್ಕೆ ಇಲ್ಲಿದೆ ಪರಿಹಾರ.

ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಇತ್ತೀಚಿಗೆ ನಡೆಸಿದ ಅಧ್ಯಯನದ ಆಧಾರದ ಮೇಲೆ ಕಚ್ಚಾ ಕೋಳಿಯನ್ನು ತೊಳೆಯುವುದು ಆರೋಗ್ಯದ ಮೇಲೆ ಕೆಲವು ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದಿದೆ.

ಇದರಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳಿಂದ ಆಹಾರ ವಿಷವಾಗುವ ಸಾಧ್ಯತೆಯಿದೆ. ಈ ಬ್ಯಾಕ್ಟೀರಿಯಾವನ್ನು ಹೊಂದಿರುವ ಮಾಂಸದ ರಸಗಳು ಅಡುಗೆ ಮನೆಗೆ ಹರಡಬಹುದು ಹಾಗೂ ಇತರ ಪಾತ್ರೆಗಳಿಗೂ ಅಂಟಿಕೊಳ್ಳಬಹುದು. ಇದು ಆರೋಗ್ಯಕ್ಕೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ ಎಂದಿದೆ.

ಹೀಗಿದ್ದೂ ತೊಳೆಯಬೇಕು ಎಂದು ನಿಮಗನಿಸಿದರೆ ಉಪ್ಪು, ವಿನೆಗರ್ ಅಥವಾ ನಿಂಬೆರಸ ಬೆರೆಸಬಹುದು. ನಿಂಬೆಹಣ್ಣನ್ನು ಚಿಕನ್ ಮೇಲ್ಮೈನಲ್ಲಿ ಉಜ್ಜಬಹುದು. ತಜ್ಞರು ಹಸಿ ಕೋಳಿಯನ್ನು ಘನೀಕರಿಸಲು ಸಲಹೆ ನೀಡುತ್ತಾರೆ, ಇದು ನೈರ್ಮಲ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...