Kannada Duniya

ಬಹಳ ವಿಶೇಷವಾದ, ರುಚಿಕರವಾದ ಪಾಲಕ್ ಕಾರ್ನ್ ತಯಾರಿಸಿ…!

ಪಾಲಕ್ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಅನೇಕ ಪೊಷಕಾಂಶಗಳನ್ನು ಹೊಂದಿದ್ದು, ಇದನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗೇ ಕಾರ್ನ್ ಕೂಡ ಆರೋಗ್ಯಕ್ಕೆ ಉತ್ತಮ. ಮಕ್ಕಳು ಕಾರ್ನ್ ಅನ್ನು ಇಷ್ಟಪಡುತ್ತಾರೆ. ಆದರೆ ಪಾಲಕ್ ತಿನ್ನಲು ಇಷ್ಟಪಡುವುದಿಲ್ಲ. ಹಾಗಾಗಿ ಮಕ್ಕಳ ಆರೋಗ್ಯಕ್ಕಾಗಿ ನೀವು ಪಾಲಕ್ ಕಾರ್ನ್ ತಯಾರಿಸಿ ನೀಡಿ.

ಬೇಕಾಗುವ ಸಾಮಾಗ್ರಿಗಳು : ಪಾಲಕ್ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ, ಸಿಹಿ ಕಾರ್ನ್. ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಗರಂ ಮಸಾಲ, ಮೊಸರು, ಎಣ್ಣೆ.

‘ರಾಜ್ಮಾ ಬೀನ್ಸ್ ಪಲಾವ್’ ಮಾಡುವ ವಿಧಾನ ಇಲ್ಲಿದೆ ನೋಡಿ…!

ಮಾಡುವ ವಿಧಾನ : ಕಾರ್ನ್ ಅನ್ನು ಕುಕ್ಕರ್ ನಲ್ಲಿ 2 ಸೀಟಿ ಹಾಕಿ ಬೇಯಿಸಿ. ನಂತರ ಬಾಣಲೆಯಲ್ಲಿ 5 ಕಪ್ ನೀರು ಸುರಿದು ಅದನ್ನು ಕುದಿಸಿ. ಅದಕ್ಕೆ ಪಾಲಕ್ ಸೊಪ್ಪನ್ನು ಹಾಕಿ 3 ನಿಮಿಷ ಬೇಯಿಸಿ. ನಂತರ ಅದನ್ನು ಸೋಸಿ. ಬಳಿಕ ಮಿಕ್ಸ್ ಯಲ್ಲಿ ಬೇಯಿಸಿದ ಪಾಲಕ್ ಸೊಪ್ಪು, ಶುಂಠಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ ನಯವಾಗಿ ಪೇಸ್ಟ್ ಮಾಡಿ. ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸಿ ಕೆಂಪಾಗುವವರೆಗೂ ಹುರಿಯಿರಿ. ಅದಕ್ಕೆ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಪ್ರೈ ಮಾಡಿ. ನಂತರ ರುಬ್ಬಿದ ಪಾಲಕ್ ಮಿಶ್ರಣವನ್ನು ಹಾಕಿ 2 ನಿಮಿಷ ಕುದಿಸಿ. ಅದಕ್ಕೆ ಗರಂ ಮಸಾಲಾ ಪುಡಿ, ಉಪ್ಪು, ಮೊಸರು ಸೇರಿಸಿ ಮಿಕ್ಸ್ ಮಾಡಿ ಕುದಿಸಿ. ಕೊನೆಯಲ್ಲಿ ಬೇಯಿಸಿದ ಕಾರ್ನ್ ಸೇರಿಸಿ 2 ನಿಮಿಷ ಬಿಸಿ ಮಾಡಿದರೆ ಪಾಲಕ್ ಕಾರ್ನ್ ರೆಡಿ.ಇದರ ಜೊತೆ ಚೀಸ್ ಸೇರಿಸಿ ಬ್ರೆಡ್ಡಿನ ಜೊತೆ ಸವಿಯಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...