Kannada Duniya

ಚುಮು ಚುಮು ಚಳಿಗೆ ಬಿಸಿ ಬಿಸಿಯಾದ ಏಡಿ ಸೂಪ್

ಚಳಿಯ ಕಾರಣದಿಂದಾಗಿ ಈಗ ಎಲ್ಲಾ ಕಡೆ ಕೆಮ್ಮು, ಶೀತ ಶುರುವಾಗಿದೆ. ಎಲ್ಲದಕ್ಕೂ ಔಷಧದ ಮೊರೆ ಹೋಗುವ ಬದಲು ಮನೆಯಲ್ಲಿಯೇ ಬಿಸಿ ಬಿಸಿಯಾದ ಸೂಪ್ ಮಾಡಿಕೊಂಡು ಕುಡಿದು ನೋಡಿ. ಇಲ್ಲಿ ಏಡಿ ಬಳಸಿ ಮಾಡಬಹುದಾದ ಸೂಪ್ ಇದೆ. ಮಾಡುವುದಕ್ಕೂ ಸುಲಭವಿದೆ. ಮನೆಯಲ್ಲಿ ಪ್ರಯತ್ನಿಸಿ ನೋಡಿ.

ಬೇಕಾಗುವ ಸಾಮಗ್ರಿಗಳು

ಏಡಿ-3, ಬೆಣ್ಣೆ-1 ಟೇಬಲ್ ಸ್ಪೂನ್, ಕಾಳು ಮೆಣಸು-4ರಿಂದ 5,ಪಲಾವ್ ಎಲೆ-1, ಚಕ್ಕೆ-1/2 ಇಂಚು, ಈರುಳ್ಳಿ-1 ಚಿಕ್ಕದಾಗಿ ಕತ್ತರಿಸಿದ್ದು, ಟೊಮ್ಯಾಟೋ-1 ಚಿಕ್ಕದಾಗಿ ಕತ್ತರಿಸಿದ್ದು, ಉಪ್ಪು-ರುಚಿಗೆ ತಕ್ಕಷ್ಟು, ಶುಂಠಿ, ಬೆಳ್ಳುಳ್ಳಿ-1 ಟೇಬಲ್ ಸ್ಪೂನ್ ಚಿಕ್ಕದಾಗಿ ಕತ್ತರಿಸಿದ್ದು, ಅರಿಶಿನ-1/4 ಟೀ ಸ್ಪೂನ್.

ಮಾಡುವ ವಿಧಾನ

ಒಂದು ಪ್ಯಾನ್ ಗೆ ಬೆಣ್ಣೆ ಹಾಕಿ ಅದು ಬಿಸಿಯಾದ ಕೂಡಲೇ ಅದಕ್ಕೆ ಕಾಳುಮೆಣಸು, ಪಲಾವ್ ಎಲೆ, ಚಕ್ಕೆ, ಈರುಳ್ಳಿ ಹಾಕಿ ಮಿಕ್ಸ್ ಮಾಡಿ. ಇದು ಕಂದು ಬಣ್ಣಕ್ಕೆ ತಿರುಗಿದ ಬಳಿಕ ಟೊಮ್ಯಾಟೋ, ಉಪ್ಪು ಸೇರಿಸಿ 3 ರಿಂದ 4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಏಡಿ ಹಾಕಿ 3 ನಿಮಿಷಗಳ ಕಾಲ ಮಿಕ್ಸ್ ಮಾಡಿಕೊಳ್ಳಿ. ನಂತರ ಬೆಳ್ಳುಳ್ಳಿ, ಶುಂಠಿ, ಅರಿಶಿನ ಪುಡಿ ಸೇರಿಸಿ ಮಿಕ್ಸ್ ಮಾಡಿ 5 ಕಪ್ ನೀರು ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿಕೊಳ್ಳಿ. ನಂತರ ಇದನ್ನು ಒಂದು ಸರ್ವಿಂಗ್ ಬೌಲ್ ಗೆ ಹಾಕಿ ಸರ್ವ್ ಮಾಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...