Kannada Duniya

ತುಟಿಗೆ ಯಾವ ಲಿಪ್ ಸ್ಟಿಕ್ ಉತ್ತಮ ಎಂಬುದನ್ನು ತಿಳಿಯಿರಿ

ಮೇಕಪ್ ನಲ್ಲಿ ಲಿಪ್ ಸ್ಟಿಕ್ ಬಹಳ ಮುಖ್ಯ. ಲಿಪ್ ಸ್ಟಿಕ್ ಹಚ್ಚಿದರೆ ಮಾತ್ರ ಮೇಕಪ್ ಆಕರ್ಷಕವಾಗಿ ಕಾಣುತ್ತದೆ. ಹಾಗಾದ್ರೆ ನಿಮ್ಮ ಅಂದದ ತುಟಿಗೆ ಯಾವ ಲಿಪ್ ಸ್ಟಿಕ್ ಉತ್ತಮ ಎಂಬುದನ್ನು ತಿಳಿಯಿರಿ.

ಮ್ಯಾಟ್ ಲಿಪ್ ಸ್ಟಿಕ್ : ಇದು ಹೊಳಪನ್ನು ನೀಡುವುದಿಲ್ಲ, ಬದಲಾಗಿ ಇದನ್ನು ಬಣ್ಣಗಳಂತೆ ಹಚ್ಚಬಹುದು. ಇದು ತುಟಿಗಳನ್ನು ತೇವಗೊಳಿಸುವುದಿಲ್ಲ. ಹಾಗಾಗಿ ಇದನ್ನು ಹಚ್ಚುವ ಮುನ್ನ ತುಟಿಗಳನ್ನು ತೇವಗೊಳಿಸಬೇಕು. ಆದರೆ ಇದು ದೀರ್ಘಕಾಲದವರೆಗೆ ಇರುತ್ತದೆ.

ಕ್ರೀಂ ಲಿಪ್ ಸ್ಟಿಕ್ : ಇದು ಮೇಣದಂತೆ ಇರುತ್ತದೆ. ಇದು ತುಟಿಗಳನ್ನು ತೇವಗೊಳಿಸುತ್ತದೆ. ಹಾಗಾಗಿ ಇವು ತುಟಿಗಳಿಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ ಇದು ಹೆಚ್ಚು ಸಮಯದವರೆಗೆ ಇರುವುದಿಲ್ಲ. ಇದು ಚಳಿಗಾಲದಲ್ಲಿ ತುಟಿಗಳಿಗೆ ಬಹಳ ಒಳ್ಳೆಯದು.

ಗ್ಲಾಸಿ ಲಿಪ್ ಸ್ಟಿಕ್ : ಇದು ತುಟಿಗಳಿಗೆ ಹೊಳಪನ್ನು ನೀಡುತ್ತದೆ. ಇದು ಒಣ ಮತ್ತು ತೆಳ್ಳಗಿರುವಂತಹ ತುಡಿಗಳಿಗೆ ಒಳ್ಳೆಯದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...