Kannada Duniya

ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ಅನ್ನು ತಪ್ಪಿಸಲು ನಿಮ್ಮ ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳಿ

ಬೇಸಿಗೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ಹೊರಗಡೆ ಬಿಸಿಲಿನ ತಾಪ ಹೆಚ್ಚಾಗಿರುತ್ತದೆ. ಇದರಿಂದ ದೇಹದ ಉಷ್ಣತೆ ಕೂಡ ಹೆಚ್ಚಾಗುತ್ತದೆ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಆದಕಾರಣ ಈ ಹೀಟ್ ಸ್ಟ್ರೋಕ್ ಅನ್ನು ತಪ್ಪಿಸಲು ಈ ಸಲಹೆ ಪಾಲಿಸಿ.

ಸೌತೆಕಾಯಿ : ಇದು ತಂಪಾದ ಗುಣವನ್ನು ಹೊಂದಿದೆ. ಇದು ದೇಹವನ್ನು ತಂಪಾಗಿಸುತ್ತದೆ. ಇದರಲ್ಲಿ ವಿಟಮಿನ್ ಗಳು , ಫೈಬರ್ ಹೇರಳವಾಗಿದೆ. ಹಾಗಾಗಿ ಇದನ್ನು ಸೇವಿಸಿದರೆ ಹೊಟ್ಟೆಯ ಉರಿ ಕಡಿಮೆಯಾಗುತ್ತದೆ.

ನಿಂಬೆ : ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದ ದೇಹವನ್ನು ಹೈಡ್ರೇಟ್ ಆಗಿ ಇರಿಸಲು ಸಾಧ್ಯ.

ಮೊಸರು : ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಅಲ್ಲದೇ ಕ್ಯಾಲ್ಸಿಯಂ, ವಿಟಮಿನ್, ಸೇರಿದಂತೆ ಹಲವು ಪೋಷಕಾಂಶಗಳಿವೆ. ಇದು ದೇಹವನ್ನು ಸದೃಢಗೊಳಿಸುತ್ತದೆ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...