Kannada Duniya

ಘಮ ಘಮ ಪರಿಮಳದ ರುಚಿಯಾದ ತುಪ್ಪದ ಅನ್ನ ಹೀಗೆ ಮಾಡಿ!

ತುಪ್ಪದ ಅನ್ನ ಎಂದರೆ ಯಾರಿಗೆ ಇಷ್ಟವಿರಲ್ಲ ಹೇಳಿ! ಮಕ್ಕಳಂತೂ ಇಷ್ಟಪಟ್ಟು ತಿನ್ನುತ್ತಾರೆ. ತುಪ್ಪ ಹಾಕಿ ಮಾಡುವ ಈ ಅನ್ನ ಪರಿಮಳದ ಜೊತೆಗೆ ಅಷ್ಟೇ ರುಚಿಯಾಗಿ ಇರುತ್ತದೆ. ಕೇರಳ ಸ್ಟೈಲ್ ನಲ್ಲಿ ಮಾಡುವ ತುಪ್ಪದ ಅನ್ನದ ವಿಧಾನ ಇಲ್ಲಿದೆ ನೋಡಿ. ಬೆಳಿಗ್ಗಿನ ತಿಂಡಿಗೆ ಕೂಡ ಇದನ್ನು ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಬಾಸುಮತಿ ಅಕ್ಕಿ-1 ಕಪ್, ತುಪ್ಪ-2 ಚಮಚ, ಈರುಳ್ಳಿ-1 , ನೀರು-2 ಕಪ್, ಏಲಕ್ಕಿ-3, ಚಕ್ಕೆ-1 ತುಂಡು, ಲವಂಗ-2, ಪಲಾವ್ ಎಲೆ-1, ಕಾಳುಮೆಣಸು- 4, ಜೀರಿಗೆ-ಚಿಟಿಕೆ, ಉಪ್ಪು-ರುಚಿಗೆ ತಕ್ಕಷ್ಟು, ಗೋಡಂಬಿ-2 ಟೇಬಲ್ ಸ್ಪೂನ್, ದ್ರಾಕ್ಷಿ-2 ಟೇಬಲ್ ಸ್ಪೂನ್.

ಮಾಡುವ ವಿಧಾನ

ಮೊದಲಿಗೆ ಅಕ್ಕಿಯನ್ನು ತೊಳೆದು ಅರ್ಧ ಗಂಟೆಗಳ ಕಾಲ ನೆನೆಸಿಡಿ. ನಂತರ ಒಂದು ಪ್ಯಾನ್ ಗೆ ಸ್ವಲ್ಪ ತುಪ್ಪವನ್ನು ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಹುರಿದುಕೊಳ್ಳಿ. ಒಂದು ಕುಕ್ಕರ್ ಗೆ 2 ಚಮಚ ತುಪ್ಪ ಹಾಕಿ ಅದಕ್ಕೆ ಜೀರಿಗೆ, ಲವಂಗ, ಏಲಕ್ಕಿ, ಚಕ್ಕೆ, ಪಲಾವ್ ಎಲೆ, ಜಜ್ಜಿಕೊಂಡ ಕಾಳುಮೆಣಸು ಹಾಕಿ ತುಸು ಫ್ರೈ ಮಾಡಿ. ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ. ಬಳಿಕ ನೆನೆಸಿಕೊಂಡ ಅಕ್ಕಿಯನ್ನು(ನೀರು ಸೇರಿಸಬೇಡಿ) ಹಾಕಿ 5 ನಿಮಿಷಗಳ ಕಾಲ ಫ್ರೈ ಮಾಡಿ.ನಂತರ ಅದಕ್ಕೆ 2 ಕಪ್ ನೀರು ಹಾಕಿ ಉಪ್ಪು ಸೇರಿಸಿ. 2 ವಿಷಲ್ ಕೂಗಿಸಿಕೊಳ್ಳಿ. ಇದಾದ ಬಳಿಕ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿದರೆ ರುಚಿಯಾದ ತುಪ್ಪದ ಅನ್ನ ಸವಿಯಲು ಸಿದ್ಧ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...