Kannada Duniya

ಏನು ರುಚಿಯಂತೀರಾ…. ಈ ಬಾಳೆಹಣ್ಣಿನ ಪಾಯಸ!

ಹಬ್ಬ ಹರಿದಿನಗಳು ಬಂದಾಗ ಪಾಯಸ ಮಾಡುತ್ತೇವೆ. ಆದರೆ ಕೆಲವೊಮ್ಮೆ ಸಿಹಿ ತಿನ್ನಬೇಕು ಅನಿಸುತ್ತದೆ. ಏನಾದರೂ ವಿಶೇಷವಾದ ಪಾಯಸ ಮಾಡಬೇಕು ಅಂದುಕೊಂಡಿದ್ದರೆ ಈ ಬಾಳೆಹಣ್ಣಿನ ಪಾಯಸ ಮಾಡಿ ನೋಡಿ. ಇದು ತುಂಬಾ ರುಚಿಕರ ಹಾಗೂ ಸುಲಭ

ಬೇಕಾಗುವ ಸಾಮಗ್ರಿಗಳು

2 ನೇಂದ್ರ ಬಾಳೆಹಣ್ಣು, 1 ಕಪ್- ಬೆಲ್ಲ, ½ ಕಪ್ –ನೀರು, ¼ ಟೀ ಸ್ಪೂನ್- ಏಲಕ್ಕಿ ಪುಡಿ, 1 ಕಪ್- ತೆಂಗಿನಕಾಯಿ ಹಾಲು, ತುಪ್ಪ-1 ಟೇಬಲ್ ಸ್ಪೂನ್, 1 ಟೇಬಲ್ ಸ್ಪೂನ್- ಚಿಕ್ಕದಾಗಿ ಕತ್ತರಿಸಿದ ತೆಂಗಿನಕಾಯಿ ತುಂಡುಗಳು.

ಮಾಡುವ ವಿಧಾನ

ಮೊದಲಿಗೆ ನೇಂದ್ರ ಬಾಳೆಹಣ್ಣಿನ ಮೇಲೆ ಮತ್ತು ಕೆಳಗಿನ ಭಾಗವನ್ನು ತುಸು ಕತ್ತರಿಸಿಕೊಂಡು ತೆಗೆದು ಉಳಿದ ಬಾಳೆಹಣ್ಣನ್ನು ಹಬೆಯಲ್ಲಿ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಬೇಯಿಸಿಕೊಂಡ ಬಾಳೆಹಣ್ಣನ್ನು ¼ ಕಪ್ ನೀರು ಸೇರಿಸಿ ರುಬ್ಬಿಕೊಳ್ಳಿ. ಒಲೆಯ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ½ ಕಪ್ ನೀರು ಹಾಕಿ ಅದಕ್ಕೆ ಬೆಲ್ಲ ಸೇರಿಸಿ. ಬೆಲ್ಲವನ್ನು ಚೆನ್ನಾಗಿ ಕರಗಿಸಿಕೊಂಡು ಗ್ಯಾಸ್ ಆಫ್ ಮಾಡಿ. ನಂತರ ಬೆಲ್ಲವನ್ನು ಸೋಸಿಕೊಳ್ಳಿ. ಒಲೆಯ ಮೇಲೆ ಒಂದು ದಪ್ಪ ತಳದ ಪಾತ್ರೆ ಇಟ್ಟು ಅದಕ್ಕೆ ತುಪ್ಪ ಹಾಕಿ ನಂತರ ರುಬ್ಬಿದ ಬಾಳೆಹಣ್ಣಿನ ಮಿಶ್ರಣ ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು  ಹದವಾಗಿ ದಪ್ಪಗಾಗಲಿ.ಬಳಿಕ ಇದಕ್ಕೆ ಬೆಲ್ಲದ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಪಾಯಸದ ಹದಕ್ಕೆ ಬರುವವರಗೆ ಮಿಕ್ಸ್ ಮಾಡಿಕೊಳ್ಳಿ. ಗ್ಯಾಸ್ ಆಫ್ ಮಾಡಿ. ಒಂದು ಕಪ್ ತೆಂಗಿನಕಾಯಿ ಹಾಲು ಸೇರಿಸಿ  ಮಿಕ್ಸ್ ಮಾಡಿಕೊಂಡು ಒಲೆ ಹೆಚ್ಚಿ ಸಣ್ಣ ಉರಿಯಲ್ಲಿ ಒಂದು ಕುದಿ ಬರುವವರೆಗೆ ಕುದಿಸಿಕೊಂಡು ಗ್ಯಾಸ್ ಆಫ್ ಮಾಡಿ ಏಲಕ್ಕಿ ಪುಡಿ ಸೇರಿಸಿ. ಒಂದು ಒಗ್ಗರಣೆ ಸೌಟಿಗೆ ತುಪ್ಪ ಹಾಕಿ ಅದಕ್ಕೆ ಕತ್ತರಿಸಿದ ತೆಂಗಿನಕಾಯಿ ಹೋಳುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿದುಕೊಂಡು ಪಾಯಸಕ್ಕೆ ಸೇರಿಸಿದರೆ ರುಚಿಯಾದ ಪಾಯಸ ರೆಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...