Kannada Duniya

ಕಾಲುಗಳಲ್ಲಿ ಮೂಡಿರುವ ಟ್ಯಾನಿಂಗ್ ಅನ್ನು ತೆಗೆಯಲು ಈ ಸ್ಕ್ರಬ್ ಬಳಸಿ

ಸೂರ್ಯ ಬಿಸಿಲಿನಲ್ಲಿ ಹೊರಗಡೆ ಓಡಾಡುವುದರಿಂದ ಚರ್ಮದ ಮೇಲೆ ಟ್ಯಾನಿಂಗ್ ಮೂಡುತ್ತದೆ. ಇದು ಹೆಚ್ಚಾಗಿ ಕೈಕಾಲುಗಳಲ್ಲಿ ಕಂಡುಬರುತ್ತದೆ. ಇದು ನಿಮ್ಮ ಕೈಕಾಲಿನ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಟ್ಯಾನಿಂಗ್ ಅನ್ನು ಹೋಗಲಾಡಿಸಲು ಈ ಸ್ಕ್ರಬ್ ಬಳಸಿ.

ಹಾಲು, ಅರಿಶಿನ, ಟೊಮೆಟೊ: ಈ ಮೂರನ್ನು ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿ ಕಾಲುಗಳಿಗೆ ಹಚ್ಚಿ ಸ್ಕ್ರಬ್ ಮಾಡಿ ಒಣಗಿದ ನಂತರ ತೊಳೆಯಿರಿ. ಇವು ಸನ್ ಟ್ಯಾನ್ ಅನ್ನು ಹೋಗಲಾಡಿಸಲು ಸಹಾಯ ಮಾಡುತ್ತವೆ.

ಕಿತ್ತಳೆ ಸಿಪ್ಪೆ ಮತ್ತು ಮೊಸರು : ಕಿತ್ತಳೆ ಸಿಪ್ಪೆಯಲ್ಲಿ ವಿಟಮಿನ್ ಸಿ ಇದೆ ಇದು ಸನ್ ಟ್ಯಾನ್ ಅನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಮೊಸರು ಚರ್ಮವನ್ನು ಮೃದವಾಗಿಸತ್ತದೆ. ಹಾಗಾಗಿ ಇವೆರಡನ್ನು ಮಿಕ್ಸ್ ಮಾಡಿ ಕಾಲುಗಳಿಗೆ ಹಚ್ಚಿ ಒಂದು ಗಂಟೆ ಬಿಟ್ಟು ತಿಳೆಯಿರಿ.

ಹಸಿ ಹಾಲು ಮತ್ತು ಅಕ್ಕಿಹಿಟ್ಟು : ಅಕ್ಕಿ ಹಿಟ್ಟು ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಚರ್ಮದ ಬಣ್ಣವನ್ನು ಹೆಚ್ಚಿಸುತ್ತದೆ. ಮತ್ತು ಹಸಿ ಹಾಲು ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತದೆ. ಹಾಗಾಗಿ ಇವೆರಡನ್ನು ಮಿಕ್ಸ್ ಮಾಡಿ ಸ್ಕ್ರಬ್ ತಯಾರಿಸಿ ಕಾಲುಗಳಿಗೆ ಹಚ್ಚಿ ಉಜ್ಜಿ ನಂತರ ತೊಳೆಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...