Kannada Duniya

ತಲೆಹೊಟ್ಟು ನಿವಾರಿಸಬೇಕೆ….? ಮೊಸರನ್ನು ಹೀಗೆ ಬಳಸಿ

ಮೊಸರಿನಿಂದ ತಲೆ ಹೊಟ್ಟಿನ ಸಮಸ್ಯೆಯನ್ನು ದೂರ ಮಾಡಬಹುದು ಎಂಬುದು ನಿಮಗೂ ತಿಳಿದಿರಬಹುದು. ಆದರೆ ಅದನ್ನು ಬಳಸುವ ಸರಿಯಾದ ವಿಧಾನ ನಿಮಗೆ ಗೊತ್ತೇ?
ಅರ್ಧ ಕಪ್ ಮೊಸರಿಗೆ ಅಲೋವೆರ ಜೆಲ್ ಅಥವಾ ನಿಂಬೆರಸವನ್ನು ಬೆರೆಸಿ ನೆತ್ತಿ ಹಾಗೂ ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಳಿಕ ಆಂಟಿ ಡ್ಯಾಂಡ್ರಫ್ ಶ್ಯಾಂಪೂ ಬಳಸಿ ತಲೆ ತೊಳೆಯಿರಿ. ವಾರಕ್ಕೆ ಎರಡು ಬಾರಿಯಂತೆ ಒಂದು ತಿಂಗಳು ನಿಯಮಿತವಾಗಿ ಇದನ್ನು ಮಾಡುತ್ತಾ ಬಂದರೆ ತಲೆ ಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ.
ಶುಷ್ಕ ತಲೆಯಲ್ಲಿ ತುರಿಕೆ ಕಾಣಿಸಿಕೊಳ್ಳುವುದು ಸಾಮಾನ್ಯ. ಒಂದು ಕಪ್ಪು ಮೊಸರಿಗೆ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ತಲೆಗೆ ಹಚ್ಚಿ. ಕನಿಷ್ಠ ಅರ್ಧ ಗಂಟೆ ಬಳಿಕ ಸ್ನಾನ ಮಾಡುವುದರಿಂದ ತುರಿಕೆ ಸಮಸ್ಯೆ ದೂರವಾಗುತ್ತದೆ. ಹೀಗೆ ಮಾಡುವಾಗ ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಮೊಸರನ್ನು ಉಪಯೋಗಿಸಿ.
ಕೂದಲು ಉದುರುವ ಸಮಸ್ಯೆ ಹೊಂದಿರುವವರು ಹಿಂದಿನ ರಾತ್ರಿ ನೆನೆಸಿಟ್ಟ ಮೆಂತೆಯನ್ನು ಬೆಳಗ್ಗೆ ರುಬ್ಬಿ, ಮೊಸರಿನ ಜೊತೆ ಸೇರಿಸಿ ನೆತ್ತಿಯ ಮೇಲೆ ಹಚ್ಚಿ. 15 ನಿಮಿಷ ಬಳಿಕ ಶಾಂಪೂವಿನಿಂದ ತೊಳೆಯಿರಿ.

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...