Kannada Duniya

ಶಿವಲಿಂಗಕ್ಕೆ ಪೂಜೆ ಮಾಡುವಾಗ ಈ ನಿಯಮ ಪಾಲಿಸಿ

ಶಿವನನ್ನು ಶಿವಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ. ಶಿವನನ್ನು ಭಕ್ತಪ್ರಿಯನೆಂದು ಕರೆಯುತ್ತಾರೆ. ಯಾಕೆಂದರೆ ಆತ ಭಕ್ತರು ಬೇಡಿದನ್ನು ಬೇಗನೆ ಕರುಣಿಸುತ್ತಾನಂತೆ. ಹಾಗಾಗಿ ಜನರು ಹೆಚ್ಚು ಶಿವನ ಪೂಜೆ ಮಾಡುತ್ತಾರೆ. ಆದರೆ ಶಿವನ ಪೂಜೆ ಮಾಡುವಾಗ ಈ ನಿಯಮ ಪಾಲಿಸಿ. ಇಲ್ಲವಾದರೆ ಶಿವನ ಕೋಪಕ್ಕೆ ಗುರಿಯಾಗುತ್ತೀರಿ.

ಶಿವಲಿಂಗಕ್ಕೆ ಪೂಜೆ ಮಾಡುವ ಮೊದಲು ಗಣೇಶನಿಗೆ ನೀರನ್ನು ಅರ್ಪಿಸಿ. ನಂತರ ಶಿವನ ಪೂಜೆ ಪ್ರಾರಂಭಿಸಿ. ಮೊದಲು ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಿ. ನೀರನ್ನು ಅರ್ಪಿಸುವಾಗ ತಾಮ್ರದ ಪಾತ್ರೆಯಲ್ಲಿ ನೀರನ್ನು ತರಬೇಕು. ಹಾಗೇ ನೀರನ್ನು ಅರ್ಪಿಸುವಾಗ “ಓಂ ನಮಃ ಶಿವಾಯ” ಮಂತ್ರವನ್ನು ಪಠಿಸಿ.

ನೀರಿನ ನಂತರ ಶಿವನಿಗೆ ಹಾಲು, ಮೊಸರು, ಜೇನುತುಪ್ಪ ಮುಂತಾದವುಗಳಿಂದ ಅಭಿಷೇಕ ಮಾಡಿ. ಹಾಗೇ ಶಿವನಿಗೆ ಹಸಿ ಹಾಲನ್ನು ಸ್ಟೀಲ್ ಪಾತ್ರೆಯಲ್ಲಿ ಅರ್ಪಿಸಬೇಕು. ಕೊನೆಗೆ ಶಿವಲಿಂಗಕ್ಕೆ ಮತ್ತೆ ನೀರಿನಿಂದ ಅಭಿಷೇಕ ಮಾಡಿ. ಹಾಗೇ ಶಿವಲಿಂಗಕ್ಕೆ ಅಭಿಷೇಕ ಮಾಡುವಾಗ ಪೂರ್ವಾಭಿಮುಖವಾಗಿ ಮಾಡಬೇಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...