Kannada Duniya

ಮಲ ವಿಸರ್ಜನೆ ಮಾಡುವುದಕ್ಕೆ ಕಷ್ಟಪಡುವವರಿಗೆ ಇಲ್ಲಿದೆ ನೋಡಿ ಟಿಪ್ಸ್!

ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ನೀರು ಕುಡಿದು ಶೌಚಾಲಯಕ್ಕೆ ತೆರಳುವುದು ಹಲವರ ಅಭ್ಯಾಸ. ಕೆಲವೊಮ್ಮೆ ಹಿಂದಿನ ದಿನದಿಂದ ಆಹಾರ ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣವಾಗದ ಕಾರಣ ಮಲವಿಸರ್ಜನೆ ಕಷ್ಟವಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಾರಿನಂಶ ದೇಹಕ್ಕೆ ಸಾಕಷ್ಟು ದೊರೆಯದೆ ಹೋದರೆ ಮಲವಿಸರ್ಜನೆ ಕಷ್ಟವಾಗುತ್ತದೆ.

ಇಂಥ ಸಮಸ್ಯೆ ನಿಮಗಿದ್ದರೆ ನಾರಿನಂಶ ಹೇರಳವಾಗಿರುವ ಖರ್ಜೂರವನ್ನು ನಿತ್ಯ ಸೇವನೆ ಮಾಡುತ್ತಾ ಬನ್ನಿ. ನಾರಿನಂಶ ಸಾಕಷ್ಟಿರುವ ಖರ್ಜೂರ
ಜೀರ್ಣಶಕ್ತಿಯನ್ನು ಚುರುಕುಗೊಳಿಸುತ್ತದೆ. ಹಿಂದಿನ ರಾತ್ರಿ ಐದಾರು ಒಣ ಖರ್ಜೂರಗಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವನೆ ಮಾಡಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ.

ಅದೇ ರೀತಿ ಒಣದ್ರಾಕ್ಷಿಗಳನ್ನು ಹಿಂದಿನ ರಾತ್ರಿಯ ನೆನೆಸಿಟ್ಟು ಬೆಳಗ್ಗೆ ಎದ್ದ ತಕ್ಷಣ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ನೈಸರ್ಗಿಕ ಸಕ್ಕರೆಯ ಅಂಶವನ್ನು ಒಳಗೊಂಡಿರುವ ಒಣದ್ರಾಕ್ಷಿಯಲ್ಲಿ ನಾರಿನಂಶದ ಜೊತೆಯೇ ಪೊಟ್ಯಾಸಿಯಂ ಕ್ಯಾಲ್ಸಿಯಂ ಗುಣಗಳಿವೆ.

ಬೆಳಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಸೇವನೆ ಮಾಡುವುದರ ಮೂಲಕ, ಊಟದಲ್ಲಿ ಮೊಸರನ್ನು ಸೇರಿಸಿಕೊಳ್ಳುವ ಮೂಲಕ ನಿಮ್ಮ ಸಮಸ್ಯೆಯನ್ನು
ಶಾಶ್ವತವಾಗಿ ಪರಿಹರಿಸಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...