Kannada Duniya

ಅರಿಶಿನ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚುವವರಿಗೆ ಇಲ್ಲಿದೆ ನೋಡಿ ಕೆಲವೊಂದು ಟಿಪ್ಸ್!

ಮುಖಕ್ಕೆ ಕಾಂತಿಯನ್ನು ನೀಡುವ ಅರಿಶಿನದಿಂದ ಫೇಸ್ ಪ್ಯಾಕ್ ಮಾಡಿಕೊಳ್ಳುವ ಮಹಿಳೆಯರೇ ಇಲ್ಲಿ ಕೇಳಿ. ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ
ಸೌಂದರ್ಯ ವೃದ್ಧಿಗೆ ಅಡ್ಡಿಯಾಗಿರಬಹುದು. ಹಾಗಾಗಿ ಅರಿಶಿನ ಫೇಸ್ ಪ್ಯಾಕ್ ಹೇಗೆ ಹಚ್ಚಬೇಕು ಎಂಬುದಕ್ಕೆ ಇಲ್ಲೊಂದಿಷ್ಟಿ ಟಿಪ್ಸ್ ಇದೆ ನೋಡಿ.

ಅರಿಶಿನದ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಮಾತ್ರ ಹಚ್ಚುವುದು ಸರಿಯಲ್ಲ. ಇದನ್ನು ಕುತ್ತಿಗೆಯ ಭಾಗಕ್ಕೂ ಹಚ್ಚಿ. ಇಲ್ಲವಾದರೆ ಫೇಸ್ ಪ್ಯಾಕ್ ಹಚ್ಚಿರುವ ಸ್ಥಳ
ಮಾತ್ರ ಕಾಂತಿಯುತವಾಗಿ ಕಂಡು ಉಳಿದ ಭಾಗ ಡಲ್ ಆಗಿ ಗೋಚರಿಸಬಹುದು.

ಅದೇ ರೀತಿ ಅರಿಶಿನವನ್ನು ಹಚ್ಚಿದ 15 ನಿಮಿಷದ ಒಳಗೆ ಮುಖ ತೊಳೆಯುವುದು ಬಹಳ ಮುಖ್ಯ. ದೀರ್ಘಕಾಲ ಇದನ್ನು ತ್ವಚೆಯಲ್ಲೇ ಬಿಡುವುದರಿಂದ ಚರ್ಮಕ್ಕೆ ಹಾನಿಯಾಗಬಹುದು. ದೀರ್ಘಕಾಲ ಈ ಹಳದಿ ಕಲೆಗಳು ಉಳಿದುಕೊಳ್ಳಬಹುದು.

ಹಚ್ಚಿದ 15 ನಿಮಿಷಗಳ ಬಳಿಕ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಇಲ್ಲವಾದರೆ ಮುಖದಲ್ಲಿ ತುರಿಕೆ ಅಥವಾ ದದ್ದುಗಳು ಕಾಣಿಸಿಕೊಳ್ಳಬಹುದು. ಹೀಗೆ ಮುಖ ತೊಳೆಯುವಾಗ ಸೋಪ್ ಅಥವಾ ಫೇಸ್ ವಾಶ್ ಅನ್ನು ಬಳಸಬಾರದು. ಕೇವಲ ನೀರಿನಿಂದ ಮಾತ್ರ ಮುಖವನ್ನು
ಸ್ವಚ್ಛಗೊಳಿಸಬೇಕು. ನೀವು ಸೋಪು ಬಳಸಿದಲ್ಲಿ ಅರಿಶಿನದ ಗುಣಗಳು ಅದರೊಂದಿಗೆ ತೊಳೆದು ಹೋಗಬಹುದು. ಅರಿಶಿನದೊಂದಿಗೆ ನೀರು ಅಥವಾ ಹಾಲು ಮಾತ್ರ ಬೆರೆಸಿ ಹಚ್ಚಿ. ನಿಂಬೆರಸ ಜೇನುತುಪ್ಪ ಅಥವಾ ಇತರ ಉತ್ಪನ್ನಗಳನ್ನು ಬೆರೆಸದಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...