Kannada Duniya

ನಿಮ್ಮ ಕೂದಲಿಗೆ ಈ ರೀತಿಯಾಗಿ ಎಣ್ಣೆಯ ಮಸಾಜ್ ಮಾಡಿ ನೋಡಿ!

ದೇಹದಲ್ಲಿ ಹಾರ್ಮೋನ್ ಗಳ ಬದಲಾವಣೆ, ಮಾನಸಿಕ ಒತ್ತಡ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯಿಂದ ಕೂದಲು ಉದುರುವ ಸಮಸ್ಯೆಯೂ ಹೆಚ್ಚುತ್ತಿದೆ. ಹಲವು ತಜ್ಞರು ಕೂದಲಿಗೆ ಸರಿಯಾದ ಕ್ರಮದಲ್ಲಿ ಎಣ್ಣೆಯಿಂದ ಮಸಾಜ್ ಮಾಡುವುದೇ ಇದಕ್ಕೆ ಪರಿಹಾರ ಎನ್ನುತ್ತಾರೆ.

ನೆತ್ತಿಯ ಭಾಗದಿಂದ ಕೂದಲಿನ ಬುಡದ ತನಕ ಸರಿಯಾಗಿ ಎಣ್ಣೆ ಹಚ್ಚಿ. ಹದಿನೈದು ನಿಮಿಷ ಕಾಲ ಮಸಾಜ್ ಮಾಡುವುದರಿಂದ ನೆತ್ತಿಯ ಭಾಗದಲ್ಲಿ ಸರಿಯಾಗಿ ರಕ್ತಸಂಚಾರ ನಡೆಯುತ್ತದೆ ಹಾಗೂ ಕೂದಲು ಉದುರುವ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ವಾರಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡುವುದು ಹೆಚ್ಚು ಉಪಯುಕ್ತ.

ಮೆಂತೆಕಾಳುಗಳು ಕೂದಲಿನ ಹಲವು ಸಮಸ್ಯೆಗಳನ್ನು ದೂರಮಾಡುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇಲ್ಲ. ಅದೇ ರೀತಿ ಕರಿಬೇವಿನ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಹಾಗೂ ಬೀಟಾ ಕೆರೋಟಿನ್ ಇದ್ದು ಇದು ಕೂದಲಿನ ಆರೋಗ್ಯಕ್ಕೆ ಬೇಕಾಗುವ ಅಮೈನೋ ಆಮ್ಲಗಳನ್ನು ಒದಗಿಸುತ್ತದೆ.

ಬಾಣಲೆಯಲ್ಲಿ ಎರಡು ಚಮಚ ಸಾಸಿವೆ ಎಣ್ಣೆ ಹಾಕಿ ಬಿಸಿ ಮಾಡಿ, ಒಂದು ಮುಷ್ಟಿ ಕರಿಬೇವಿನ ಸೊಪ್ಪು ಹಾಗೂ ಎರಡು ಟೀ ಚಮಚ ಮೆಂತೆಕಾಳು ಸೇರಿಸಿ ಚೆನ್ನಾಗಿ ಹುರಿಯಿರಿ. ಕಪ್ಪು ಬಣ್ಣಕ್ಕೆ ಬರುತ್ತಲೇ ಉರಿಯಿಂದ ಕೆಳಗಿಳಿಸಿ. ತಣ್ಣಗಾದ ಬಳಿಕ ತಲೆಗೆ ಹಚ್ಚಿಕೊಳ್ಳಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...