Kannada Duniya

ನಿಮ್ಮ ಕೂದಲಿನ ಆರೋಗ್ಯಕ್ಕೆ ಬಳಸಿ ತೆಂಗಿನಕಾಯಿ ನೀರು!

ಎಳೆನೀರಿನ ಆರೋಗ್ಯ ಲಾಭಗಳ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಅದೇ ರೀತಿ ತೆಂಗಿನಕಾಯಿಯ ನೀರಿನಿಂದಲೂ ಹಲವು ಆರೋಗ್ಯ ಲಾಭಗಳಿವೆ. ಅದರಲ್ಲೂ ಕೂದಲಿನ ಆರೈಕೆಗೆ ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ.

ತೆಂಗಿನಕಾಯಿ ನೀರಿನಿಂದ ಕೂದಲನ್ನು ತೊಳೆಯುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಮತ್ತು ಅದು ಕೂದಲನ್ನು ಮೃದುವಾಗಿ ಮಾಡುತ್ತದೆ. ಇದು ಕೂದಲಿನ ಕಿರು ಚೀಲಗಳನ್ನು ಪೋಷಿಸುವುದರ ಜೊತೆಗೆ ನೆತ್ತಿಯ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ.

ಉತ್ಕರ್ಷಣ ನಿರೋಧಕ ಗುಣ ಸಮೃದ್ಧವಾಗಿರುವ ತೆಂಗಿನ ನೀರನ್ನು ನೆತ್ತಿಗೆ ಹಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆ ದೂರವಾಗುತ್ತದೆ. ಕೂದಲಿನಲ್ಲಿ ಜಲ ಸಂಚಯನ ಹೆಚ್ಚುತ್ತದೆ ಹಾಗೂ ಒಣ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ. ಆ ಬಳಿಕ ಶಾಂಪೂವಿನಿಂದ ನಿಮ್ಮ ಕೂದಲನ್ನು ತೊಳೆಯಲು ಮರೆಯದಿರಿ.

ಹಿಸುಕಿದ ಬಾಳೆಹಣ್ಣಿಗೆ ಒಂದು ಚಮಚ ಮೊಸರು ಸೇರಿಸಿ ಅದಕ್ಕೆ ತೆಂಗಿನ ನೀರು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ನೆತ್ತಿಯ ಭಾಗಕ್ಕೆ ಹಚ್ಚಿ ಅರ್ಧ ಗಂಟೆ ಬಳಿಕ ತಲೆ ತೊಳೆಯುವುದರಿಂದ ಕೂದಲು ದಪ್ಪಗೆ ಹಾಗು ಉದ್ದಕ್ಕೆ ಬೆಳೆಯುತ್ತದೆ.

ತೆಂಗಿನ ಎಣ್ಣೆಯ ರೀತಿಯಲ್ಲಿ ತೆಂಗಿನ ನೀರಿನಿಂದಲೂ ತಲೆಗೆ ಮಸಾಜ್ ಮಾಡಿಕೊಳ್ಳಬಹುದು. ವಾರಕ್ಕೆರಡು ಬಾರಿ ಹೀಗೆ ಮಾಡುವುದರಿಂದ ಲಾಭ ಹೆಚ್ಚು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...