Kannada Duniya

ಐಸ್ ಕ್ಯೂಬ್ ಫೇಶಿಯಲ್ ಮಾಡುವುದರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ!

ಮೇಕಪ್ ಮಾಡುವ ಮುನ್ನ ಪಾರ್ಲರ್ ಗಳಲ್ಲಿ ಐಸ್ ಕ್ಯೂಬ್ ನಿಂದ ಮುಖವನ್ನು ಉಜ್ಜುವುದನ್ನು ನೀವು ಗಮನಿಸಿರಬಹುದು. ಇದರಿಂದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ?

ತ್ವಚೆಯ ಸುಕ್ಕುಗಳನ್ನು ಹೋಗಲಾಡಿಸಿ ಮತ್ತೆ ಆಕರ್ಷಣೀಯವಾಗಿ ಕಾಣುವಂತೆ ಮಾಡಲು ಐಸ್ ತುಂಡುಗಳನ್ನು ಬಳಸಲಾಗುತ್ತದೆ ಇದನ್ನು ಕ್ರಯೋಫೇಶಿಯಲ್ ಎಂದೂ ಕರೆಯಲಾಗುತ್ತದೆ.

ಮಂಜುಗಡ್ಡೆ ಅಥವಾ ಯಾವುದೇ ತಂಪಾದ ವಸ್ತು ದೇಹಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ, ಕಣ್ಣಿನ ಸುತ್ತ ದಪ್ಪಗಾಗಿರುವುದನ್ನು ನಿವಾರಿಸುತ್ತದೆ. ಬಿಸಿಲಿನ ಅವಲಕ್ಷಣಗಳನ್ನು ದೂರಮಾಡುತ್ತದೆ.

ಮೇಕಪ್ ಮಾಡುವ ಮೊದಲು ಇದರಿಂದ ಮಸಾಜ್ ಮಾಡಿಕೊಂಡರೆ ತಾತ್ಕಾಲಿಕವಾಗಿ ತೆರೆದ ತ್ವಚೆಯ ರಂಧ್ರಗಳನ್ನು ಇದು ಮುಚ್ಚುತ್ತದೆ. ಐಸ್ ಅನ್ನು ನೈಸರ್ಗಿಕ ಪ್ರೈಮರ್ ಆಗಿಯೂ ಬಳಸಬಹುದು. ಇದು ಮೊಡವೆಗಳ ನಿರ್ಮೂಲನೆಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಿಲ್ಲ.

ಒಮ್ಮೆ ಐಸ್ ಮಸಾಜ್ ಮಾಡಿಕೊಳ್ಳುವಾಗ ಹತ್ತು ನಿಮಿಷಕ್ಕಿಂತ ಹೆಚ್ಚು ಮಾಡಬಾರದು ಹಾಗೂ ವಾರಕ್ಕೆ ಮೂರು ಬಾರಿಗಿಂತ ಹೆಚ್ಚು ಬಳಸಬಾರದು, ಇಲ್ಲವಾದರೆ ಇದು ಐಸ್ ಬರ್ನ್ ಗೆ ಕಾರಣವಾಗಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...