Kannada Duniya

ಬೇಸಿಗೆಯಲ್ಲಿ ಮೇಕಪ್ ಬೆವರಿನಿಂದ ಹಾಳಾಗಬಾರದಂತಿದ್ದರೆ ಈ ಸಲಹೆ ಪಾಲಿಸಿ

ಬೇಸಿಗೆಯಲ್ಲಿ ಮೇಕಪ್ ಅನ್ನು ಹಾಳಾಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಬೇಸಿಗೆಯಲ್ಲಿ ಬಿಸಿಲಿನ ಬೇಗೆಗೆ ದೇಹದಲ್ಲಿ ಬೆವರು ಧಾರಾಕಾರವಾಗಿ ಸುರಿಯುತ್ತಿರುತ್ತದೆ. ಇದರಿಂದ ನೀವು ಮುಖಕ್ಕೆ ಹಾಕಿದ ಮೇಕಪ್ ಹಾಳಾಗುತ್ತದೆ. ಹಾಗಾಗಿ ಈ ಮೇಕಪ್ ಅನ್ನು ಕಾಪಾಡಿಕೊಳ್ಳಲು ಈ ಸಲಹೆ ಪಾಲಿಸಿ.

ಬೇಸಿಗೆಯಲ್ಲಿ ಮುಖಕ್ಕೆ ಮೇಕಪ್ ಹಚ್ಚುವ ಮೊದಲು ಮಾಯಿಶ್ಚರೈಸರ್ ಅನ್ನು ಹಚ್ಚಿ. ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಬೆವರಿನ ರಂಧ್ರಗಳನ್ನು ಮುಚ್ಚುತ್ತದೆ.

ಬೇಸಿಗೆಯಲ್ಲಿ ಹೆಚ್ಚಾಗಿ ಫೌಂಡೇಶನ್ ಪೌಡರ್ ಅನ್ನು ಹಚ್ಚಿ. ಇದರಿಂದ ಬೆವರು ಹೆಚ್ಚು ಬರುವುದಿಲ್ಲ ಮೇಕಪ್ ಹಾಳಾಗುವುದಿಲ್ಲ.

ಕಣ್ಣಿನ ಕೆಳಗಿನ ಮೇಕಪ್ ಹಾಳಾಗಬಾರದಂತಿದ್ದರೆ ಕಣ್ಣಿನ ಅಡಿಭಾಗದಲ್ಲಿ ಸೆಟ್ಟಿಂಗ್ ಪೌಡರ್ ಅನ್ನು ಹಚ್ಚಿ. ಇದರಿಂದ ಕಣ್ಣಿನ ಮೇಕಪ್ ಹಾಳಾಗುವುದಿಲ್ಲ. ಹಾಗೇ ಬೇಸಿಗೆಯಲ್ಲಿ ಕಣ್ಣಿಗೆ ವಾಟರ್ ಪ್ರೂಪ್ ಕಾಜಲ್ ಅನ್ನು ಹಚ್ಚಿ.

ಹಾಗೇ ಬೇಸಿಗೆಯಲ್ಲಿ ಸೆಟ್ಟಿಂಗ್ ಸ್ಪ್ರೇ ಬಳಸುವುದನ್ನು ಮರೆಯಬೇಡಿ. ಇದು ಮೇಕಪ್ ದೀರ್ಘಕಾಲ ಇರಲು ಸಹಾಯ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...