Kannada Duniya

ದಾಸವಾಳ ಬಳಸಿ; ಕೂದಲಿನ ಕಾಳಜಿ ವಹಿಸಿ….!

ದಾಸವಾಳದಸೊಪ್ಪು, ಹೂ ಕೂದಲ ಬೆಳವಣಿಗೆಗೆ ತುಂಬಾನೇ ಒಳ್ಳೆಯದು. ಮಾರುಕಟ್ಟೆಯಿಂದ ತಂದ ಶಾಂಪೂ, ಕಂಡೀಷನರ್ ಗಳನ್ನು ತಲೆಗೆ ಹಚ್ಚಿಕೊಂಡು ಇರುವ ಕೂದಲನ್ನು ಹಾಳು ಮಾಡಿಕೊಳ್ಳುವ ಬದಲು ವಾರಕ್ಕೊಮ್ಮೆಯಾದರೂ ದಾಸವಾಳ ಸೊಪ್ಪಿನ ಮಿಶ್ರಣವನ್ನು ಉಪಯೋಗಿಸಿದರೆ ಕೂದಲಿನ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ.

8ರಿಂದ 10 ದಾಸವಾಳದ ಎಲೆ, 5 ದಾಸವಾಳದ ಹೂ ತೆಗೆದುಕೊಂಡು ನಯವಾಗಿ ರುಬ್ಬಿಕೊಳ್ಳಿ. 100 ಎಂಎಲ್ ತೆಂಗಿನೆಣ್ಣೆಯನ್ನು ಬಿಸಿ ಮಾಡಿಕೊಂಡು ಅದಕ್ಕೆ ಈ ರುಬ್ಬಿಕೊಂಡ ಮಿಶ್ರಣವನ್ನು ಹಾಕಿಕೊಳ್ಳಿ. ಇದನ್ನು ನಿಮ್ಮ ತಲೆಗೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿ.ನಂತರ ಸ್ನಾನ ಮಾಡಿ. ವಾರದಲ್ಲಿ 3 ಸಲ ತಲೆಗೆ ಹಚ್ಚಿಕೊಂಡರೆ ಉತ್ತಮ ಫಲಿತಾಂಶ ಸಿಗುತ್ತದೆ.

8 ದಾಸವಾಳದ ಎಲೆಗಳನ್ನು ನಯವಾಗಿ ರುಬ್ಬಿಕೊಳ್ಳಿ. ಇದಕ್ಕೆ 1 ಲಿಂಬೆಹಣ್ಣಿನ ರಸವನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ ನಿಮ್ಮ ತಲೆಯ ಬುಡಕ್ಕೆ ಚೆನ್ನಾಗಿ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತಲೆಸ್ನಾನ ಮಾಡಿ. ಇದು ತಲೆಯ ಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ.

ಬಿಸಿಯಾದ ಆಹಾರವನ್ನು ಸೇವಿಸಿ ನಾಲಿಗೆ ಉರಿಯುತ್ತಿದ್ದರೆ ಈ ಮನೆಮದ್ದನ್ನು ಹಚ್ಚಿ….!

5 ದಾಸವಾಳದ ಎಲೆ, 8 ದಾಸವಾಳದ ಹೂಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಇದಕ್ಕೆ 1 ಕಪ್ ಅಲೋವೆರಾ ಜೆಲ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ನಿಮ್ಮ ತಲೆಗೆ ಹಚ್ಚಿಕೊಂಡು 30 ನಿಮಿಷ ಬಿಟ್ಟು ಸ್ನಾನ ಮಾಡಿ. ಕೂದಲು ಸೊಂಪಾಗಿ ಬೆಳೆಯುವುದರ ಜೊತೆಗೆ ನಯವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...