Kannada Duniya

ಬಿಸಿಯಾದ ಆಹಾರವನ್ನು ಸೇವಿಸಿ ನಾಲಿಗೆ ಉರಿಯುತ್ತಿದ್ದರೆ ಈ ಮನೆಮದ್ದನ್ನು ಹಚ್ಚಿ….!

ಕೆಲವರಿಗೆ ಆಹಾರವನ್ನು ಬಿಸಿ ಬಿಸಿಯಾಗಿ ಸೇವಿಸುವುದೆಂದರೆ ತುಂಬಾ ಇಷ್ಟ. ಆದರೆ ಇದರಿಂದ ಅವರ ನಾಲಿಗೆ ಸುಡುವುದರಿಂದ ಉರಿ ಕಂಡುಬರುತ್ತದೆ. ಹಾಗಾಗಿ ಈ ಉರಿಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

ನಾಲಿಗೆಯಲ್ಲಿ ಸುಡುವ ವೇದನೆ ಕಾಡಿದರೆ ನಾಲಿಗೆಯ ಮೇಲೆ ಐಸ್ ನಿಂದ ಮಸಾಜ್ ಮಾಡಿ. ಅಥವಾ ತಣ್ಣ ಗಿರುವ ನೀರನ್ನು ಕುಡಿಯಿರಿ. ಇದರಿಂದ ನಾಲಿಗೆ ತಂಪೆನಿಸುತ್ತದೆ.

ನಾಲಿಗೆಯಲ್ಲಿ ಉರಿ ಕಂಡುಬಂದರೆ ಜೇನುತುಪ್ಪವನ್ನು ಹಚ್ಚಿ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ನಾಲಿಗೆಯಲ್ಲಿ ಸೋಂಕು ಉಂಟಾಗುವುದನ್ನು ತಡೆಯುತ್ತದೆ.

ಮನೆಯಲ್ಲಿ ಶಾಂತಿ ನೆಲೆಸಲು ಈ ಸಲಹೆಗಳನ್ನು ಪಾಲಿಸಿ…..!

ಹಾಗೇ ನಾಲಿಯಲ್ಲಿ ಉರಿ ಕಂಡುಬಂದರೆ ಐಸ್ ಕ್ರೀಂ, ಮೊಸರು, ಮಿಲ್ಕ್ ಶೇಕ್ ಮುಂತಾದ ತಂಪು ಪಾನೀಯಗಳನ್ನು ಸೇವಿಸಿ.
ನಾಲಿಗೆಯಲ್ಲಿ ಉರಿ ಇದ್ದರೆ ಅದಕ್ಕೆ ಅಲೋವೆರಾ ಜೆಲ್ ಹಚ್ಚಿ. ಇದರಲ್ಲಿ ತಂಪಾಗಿಸುವ ಗುಣವಿದೆ. ಹಾಗಾಗಿ ನಾಲಿಗೆಯ ಉರಿ ಕಡಿಮೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...