Kannada Duniya

ಕೂದಲು ಬೆಳೆಸುವ ಸುಲಭ ಟಿಪ್ಸ್….!

ನೀಳವಾದ ಕೂದಲು ಬೆಳೆಸಲು ಬಯಸುವವರು ಈ ಕೆಲವು ತರಕಾರಿಗಳನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಕೂದಲ ಸಮಸ್ಯೆ ನಿವಾರಣೆಯಾಗುವುದು ಮಾತ್ರವಲ್ಲ ನಿಮ್ಮ ಆರೋಗ್ಯದಲ್ಲೂ ಸುಧಾರಣೆ ಕಂಡು ಬರುತ್ತದೆ.

ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿಯಲ್ಲಿ ಬದಲಾವಣೆಯಾಗಿರುವುದು ಕೂದಲು ಉದುರುವ ಸಮಸ್ಯೆಗೆ ಪ್ರಮುಖ ಕಾರಣ. ಅದರ ನಿವಾರಣೆಗೆ ನೀವು ಸಾಕಷ್ಟು ಪ್ರಮಾಣದಲ್ಲಿ ಹಸಿರು ತರಕಾರಿಗಳನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ಅದರಲ್ಲೂ ಮುಖ್ಯವಾಗಿ ಪಾಲಕ್ ಸೊಪ್ಪು, ಬಸಳೆ ಸೊಪ್ಪಿನ ಸೇವನೆಯಿಂದ ಸಾಕಷ್ಟು ಪ್ರಮಾಣದ ಕಬ್ಬಿಣಾಂಶ ನಿಮ್ಮ ದೇಹಕ್ಕೆ ಲಭಿಸುತ್ತದೆ ಮತ್ತು ಕೂದಲಿನ ಬೆಳವಣಿಗೆ ಸುಲಭವಾಗುತ್ತದೆ.

ತರಕಾರಿಗಳ ಪೈಕಿ ಬೀನ್ಸ್ ಸೇವನೆಯಿಂದ ಉದ್ದ ಕೂದಲು ನಿಮ್ಮದಾಗಬಹುದು. ಇದರಲ್ಲಿ ಕಬ್ಬಿಣಾಂಶದ ಜೊತೆಗೆ ಬಯೋಟಿನ್ ಮತ್ತು ವಿಟಮಿನ್ ಗಳು ದೊರೆಯುತ್ತವೆ. ಕೂದಲು ಬುಡದಿಂದಲೇ ಬೆಳೆಯಲು ಆರಂಭಿಸುತ್ತದೆ.

ಅಧಿಕ ಕೊಲೆಸ್ಟ್ರಾಲ್ ನಿಂದ ಈ ಕಾಯಿಲೆಗಳು ಕಾಡುತ್ತದೆಯಂತೆ….!

ಅದೇ ರೀತಿ ಕ್ಯಾರೆಟ್ ನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಂ ಅಂಶಗಳಿದ್ದು ಇದರ ಸೇವನೆಯಿಂದಲೂ ಕೂದಲಿನ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ನೀಳವಾಗಿ ಕೂದಲು ಬೆಳೆಯುತ್ತದೆ. ಸಾಧ್ಯವಾದಷ್ಟು ಜಂಕ್ ಫುಡ್ ಮತ್ತು ಬಾಟಲ್ ಜ್ಯೂಸ್ ಗಳನ್ನು ದೂರವಿಡುವ ಮೂಲಕ ನಿಮ್ಮ ಆರೋಗ್ಯದ ಹಾಗೂ ಕೂದಲಿನ ಕಾಳಜಿ ಮಾಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...